ಕೊಪ್ಪಳ: ನಾಡಿನ ಪ್ರಸಿದ್ದ ಕೊಪ್ಪಳದ ಶ್ರೀ ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕೋವಿಡ್ ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಸೋಂಕಿತರಿದ್ದು ಅವರ ಆರೈಕೆ ಬಗ್ಗೆ ಹೆಚ್ಚು ಗಮನ ಹರಿಸಿರುವ ಶ್ರೀಗಳು, ನಿಮಗೆ ಏನೂ ಆಗಲ್ಲ. ಧೈರ್ಯವಾಗಿರಿ. ನಿಮ್ಮನ್ನು ಪ್ರತಿ ದಿನವೂ ವೈದ್ಯರು ಚಿಕಿತ್ಸೆ ನೀಡುವ ಮೂಲಕ ನಿಮ್ಮ ಆರೋಗ್ಯದ ಹೆಚ್ಚು ನಿಗಾ ಇರಿಸಿದ್ದಾರೆ. ನಿಮಗೆ ಏನೇ ಸಮಸ್ಯೆಯಾದರೂ ಕೂಡಲೇ ಗಮನಕ್ಕೆ ನಮ್ಮ, ವೈದ್ಯರ ಗಮನಕ್ಕೆ ತನ್ನಿ, ನಿತ್ಯವೂ ಚಿಕಿತ್ಸೆಗೆ ಸ್ಪಂದಿಸಿ ಎಂದರು.
ಅಲ್ಲದೇ ಸೋಂಕಿತರಿಗೆ ಧ್ಯಾನ, ಯೋಗಾಸನ ಹಾಗೂ ಅವರ ಜೊತೆ ಕೇರಂ ಆಡುವ ಮೂಲಕ ನಿಮ್ಮೊಟ್ಟಿಗೆ ನಾವಿದ್ದೇವೆ ಎಂದು ಶ್ರೀಗಳು ಆತ್ಮಸ್ಥೈರ್ಯದ ಮಾತನ್ನಾಡುತ್ತಿದ್ದಾರೆ.
Laxmi News 24×7