Breaking News

ರಕ್ಷಣೆ ಇಲ್ಲದೆ ಸೋಂಕಿತ ಶವ ಹಸ್ತಾಂತರ; ಆರೋಪ

Spread the love

ರಾಯಚೂರು: ಇಲ್ಲಿನ ಓಪೆಕ್ ಕೋವಿಡ್ ಆಸ್ಪತ್ರೆಯಲ್ಲಿ‌ ಮೃತ ಸೊಂಕಿತರ ಶವಗಳಿಗೆ ಕವರ್ ಹಾಕದೆ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಸೋಂಕಿನಿಂದ ದಾಖಲಾದವರು ಮೃತಪಟ್ಟಲ್ಲಿ ಆಸ್ಪತ್ರೆ ಸಿಬ್ಬಂದಿಯೇ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಇಲ್ಲವೇ ಕುಟುಂಬಸ್ಥರು ಶವ ಕೇಳಿದರೆ, ಶವವನ್ನು ಸಂಪೂರ್ಣ ಕವರ್ ಮಾಡಿ ಕೊಡಬೇಕಿದೆ. ಈವರೆಗೂ ಹಾಗೆಯೇ ನೀಡಲಾಗುತ್ತಿದೆ. ಆದರೆ, ವೀಡಿಯೋ ಹರಿದಾಡುತ್ತಿದ್ದು ಅದರಲ್ಲಿ ಶವ ಹಸ್ತಾರಿಸುವಾಗ ಯಾವುದೇ ಕವರ್ ಹಾಕಿಲ್ಲ. ಪಿಪಿಇ ಕಿಟ್ ಸಹ ನೀಡದೆ ಸಂಬಂಧಿಕರೆ ಅಂತ್ಯ ಸಂಸ್ಕಾರ ಮಾಡುವಂತೆ ಸಿಬ್ಬಂದಿ ಶವ ಒಪ್ಪಿಸಿದ್ದಾರೆ.

ಮೃತ ಸೊಂಕಿತನ ಸಂಬಂಧಿಕರೇ ಶವ ಸಾಗಿಸಿದ್ದಾರೆ. ಆದರೆ, ಆರೋಪ ಅಲ್ಲಗಳೆದಿರುವ ರಿಮ್ಸ್ ನಿರ್ದೇಶಕ ಬಸವರಾಜ ಪೀರಾಪುರ ನಾವು ಯಾವುದೇ ಶವವನ್ನು ಹಾಗೆಯೇ ಕಳುಹಿಸಿಲ್ಲ. ನಾನ್ ಕೋವಿಡ್ ಪ್ರಕರಣವಾದರೆ ಕವರ್ ಬೇಕಿಲ್ಲ. ಘಟನೆ ಬಗ್ಗೆ ಮಾಹಿತಿ ಪಡೆಯವುದಾಗಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ