Breaking News

ಕ್ವಾರಂಟೈನ್ ಕೋಣೆ ಮುಂದೆಯೇ ಮಲವಿಸರ್ಜಿಸಿ ವಿಕೃತಿ – ತಬ್ಲಿಘಿಗಳ ವಿರುದ್ಧ ಕೇಸ್

Spread the love

ನವದೆಹಲಿ: ಕೊರೊನಾ ಕ್ವಾರಂಟೈನ್ ಕೋಣೆಯ ಮುಂದೆಯೇ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ತಬ್ಲಿಘಿಗಳು ಕ್ವಾರಂಟೈನ್ ಕೊಠಡಿಯ ಮುಂದೆಯೇ ಮಲವಿಸರ್ಜನೆ ಮಾಡಿ ವಿಕೃತಿ ಮರೆದಿರುವಂತಹ ಘಟನೆ ನರೇಲಾ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಕ್ವಾರಂಟೈನ್ ಕೋಣೆಯ ಮುಂದೆ ಮುಲವಿಸರ್ಜನೆ ಮಾಡಿದ ಇಬ್ಬರ ಮೇಲೆ ದೂರು ದಾಖಲಾಗಿದೆ. ಈ ಇಬ್ಬರು ಆರೋಪಿಗಳು ಉತ್ತರ ಪ್ರದೇಶದ ಬರಾಬಂಕಿ ನಿವಾಸಿಗಳಾಗಿದ್ದು, ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ

 

ಈ ವಿಚಾರದ ಬಗ್ಗೆ ಮಾತನಾಡಿರುವ ಕ್ವಾರಂಟೈನ್ ಸೆಂಟರ್‍ನ ಸಿಬ್ಬಂದಿ ಅವರು ಕ್ವಾರಂಟೈನ್ ಕೋಣೆ 212 ಮುಂದೆಯೇ ಮಲವಿಸರ್ಜನೆ ಮಾಡಿದ್ದಾರೆ. ಈ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವು. ಅವರ ಈ ಕೃತ್ಯದಿಂದ ನಮಗೆ ಅಸಹ್ಯವಾಗಿದೆ. ಇಲ್ಲಿರುವ ಕೆಲ ಕೊರೊನಾ ಶಂಕಿತರು ಆರೋಗ್ಯ ಇಲಾಖೆ ಮತ್ತು ಸರ್ಕಾರ ನೀಡುತ್ತಿರುವ ಕೊರೊನಾ ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.

ಇವರು ನಾವು ಹೇಳಿದ್ದನ್ನು ಕೇಳುತ್ತಿಲ್ಲ. ಸರ್ಕಾರದ ನಿಯಮದಂತೆ ನಡೆಯುತ್ತಿಲ್ಲ. ಇದರಿಂದ ಇವರ ಜೀವಕ್ಕೂ ಅಪಾಯವಿದೆ. ಅವರ ಜೊತೆಗೆ ಬೇರೆಯವರ ಮತ್ತು ನಮ್ಮ ಪ್ರಾಣವನ್ನು ಅಪಾಯಕ್ಕೆ ತಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಆರೋಪ ಮಾಡಿದ್ದಾರೆ. ಪೊಲೀಸರು ಈಗ ಇಬ್ಬರ ಮೇಲೆ ಕೇಸ್ ದಾಖಲಿಸಿದ್ದಾರೆ

 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ