Breaking News

ಫೇಸ್​​ಬುಕ್​ನಲ್ಲಿ ಪರಿಚಯ ಮಾಡ್ಕೊಂಡು ವಿಡಿಯೋ ಕಾಲ್​ನಲ್ಲಿ ನೀಚ ಕೃತ್ಯ :ಈ ಕಿಲಾಡಿ ಲೇಡಿ ಇಂದ ಹುಷಾರಾಗಿರಿ….

Spread the love

ನಲ್ಗೊಂಡ: ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು, ನಂಬಿಸಿ ಹಣ ಪಡೆದುಕೊಂಡು ವಂಚಿಸುತ್ತಿದ್ದ ಕಿಲಾಡಿ ಲೇಡಿಯನ್ನು ನಲ್ಗೊಂಡ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.

ಆರೋಪಿಯನ್ನು ತೆಲಂಗಾಣದ ಖಮ್ಮಮ್​ ಜಿಲ್ಲೆಯ ಸತ್ತುಪಲ್ಲಿ ನಿವಾಸಿ ಪಂತಂಗಿ ಮಹೇಶ್ವರಿ ಅಲಿಯಾಸ್​ ಧರಣಿ ರೆಡ್ಡಿ ಎಂದು ಗುರುತಿಸಲಾಗಿದೆ. ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಳಾಗಿರುವ ಮಹೇಶ್ವರಿ, ಅನೇಕ ಯುವಕರಿಗೆ ಮದುವೆ ಹೆಸರಿನಲ್ಲಿ ನಂಬಿಸಿ ಹಣ ಪಡೆದುಕೊಂಡು ವಂಚನೆ ಮಾಡಿದ್ದಾಳೆ.

ಇತ್ತೀಗೆಚೆ ಈಕೆ ಹೈದರಾಬಾದ್​​ನ ಕೊಂಪಲ್ಲಿ ಮೂಲದ ವೆಂಕಟೇಶ್​ ಎಂಬಾತನನ್ನು ಫೇಸ್​ಬುಕ್​ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಆತನೊಂದಿಗೆ ಅಶ್ಲೀಲ ವಿಡಿಯೋ ಚಾಟ್​ ಮಾಡಿದ್ದ ಈಕೆ ಅದನ್ನು ರೆಕಾರ್ಡ್​ ಮಾಡಿಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟು, ಹಣವನ್ನು ಪಡೆದುಕೊಂಡಿದ್ದಳು. ಇನ್ನೊಂದೆಡೆ ಯುವಕರಿಗೆ ಮಾತ್ರವಲ್ಲದೆ ಅನೇಕ ಯುವತಿಯರಿಗೆ ಈಕೆ ವಂಚಿಸಿದ್ದಾಳೆ. ಸೂಕ್ತ ವರನನ್ನು ಹುಡುಕಿಕೊಡುತ್ತೇನೆಂದು ಹೇಳಿ, ಅವರಿಂದ ಹಣ ಪಡೆದುಕೊಂಡು ವಂಚನೆ ಮಾಡಿದ್ದಾಳೆ.

ಫೇಸ್​ಬುಕ್​ ಪ್ರೊಫೈಲ್​ನಲ್ಲಿ ಫೋಟೋ ಬದಲಾಯಿಸಿ ಕಿಲಾಡಿ ಲೇಡಿ ವಂಚನೆ ಮಾಡುತ್ತಿದ್ದಳು. ಇತ್ತೀಚೆಗೆ ಈಕೆ 11.70 ಲಕ್ಷ ರೂ. ಅನ್ನು ಪಡೆದುಕೊಂಡಿದ್ದಳು. ಇವಳಿಂದ ಡಜನ್​ಗೂ ಅಧಿಕ ಮಂದಿ ಮೋಸ ಹೋಗಿದ್ದಾರೆ.

ಮಹೇಶ್ವರಿ ನಲ್ಗೊಂಡ ಪೊಲೀಸ್​ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು, ಆಕೆಯನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈಕೆಯ ವಿರುದ್ಧ ಕುಕಟಪಲ್ಲಿ, ಘಾಟ್ಕೇಸರ್​, ಖಮ್ಮಮ್​, ಸತ್ತುಪಲ್ಲಿ ಮತ್ತು ವೆನ್ಸುನ್​ ಸೇರಿದಂತೆ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿವೆ. ಇದೀಗ ನಲ್ಗೊಂಡ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಶಿಕ್ಷೆ ಅನುಭವಿಸುತ್ತಿದ್ದಾಳೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ