Breaking News

ಲಾಠಿ ಪ್ರಹಾರದಿಂದ ಕೋವಿಡ್ ಹೋಗಲ್ಲ, ಬೆಡ್, ಆಕ್ಸಿಜನ್ ನೀಡಿ : ಸಿಎಂ ವಿರುದ್ಧ ಶರವಣ ಕಿಡಿ

Spread the love

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನೈಟ್ ಕರ್ಫ್ಯೂ ಜೊತೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಅಲ್ಲದೆ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ರಾಜ್ಯದಲ್ಲಿ ಎಲ್ಲವನ್ನೂ ಬಂದ್ ಮಾಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಫೇಸ್ ಬುಕ್ ನಲ್ಲಿ ಸಿಎಂ ವಿರುದ್ಧ ಹರಿ ಹಾಯ್ದಿದ್ದಾರೆ.

ಮಾನ್ಯ ಯಡಿಯೂರಪ್ಪ ನವರೇ ಕೊರೋನಾ ಹತೋಟಿಗೆ ತರಲು ಸರ್ಕಾರ ವಿಫಲವಾದ ನಂತರ ಜನರ ಮೇಲೆ ಲಾಠಿ ಪ್ರಹಾರ ಮಾಡಿ ವಿನಾ: ಕಾರಣ ಗಲಾಟೆ ಮಾಡಿ ಪೋಲಿಸ್ ಅಧಿಕಾರಿಗಳು ಜನಸಾಮಾನ್ಯರಿಗೆ ಕೊಡುತ್ತಿರವ ಕಿರುಕುಳ ಅಷ್ಟಿಷ್ಟಲ್ಲ.

ಇದರಿಂದ ಕೊರೋನಾ ಹೋಗೋಲ್ಲಾ . ಬಡಜನರಿಗೆ ಬೇಕಾದ ಆಸ್ಪತ್ರೆಯಲ್ಲಿ ಬೆಡ್, ಐಸಿಯು, ವೆಂಟಿಲೇಟರ್, ಆಕ್ಸಿಜನ್, ಆಂಬ್ಯುಲೆನ್ಸ್, ಚಿತಾಗಾರ, ಸ್ಮಶಾನ, ರೆಮಿಡಿಸವೇರ್ ಇಂಜೆಕ್ಷನ್, ವ್ಯಾಕ್ಸಿನ್ ಇವುಗಳನ್ನು ಸರಿಯಾದ ಸಮಯದಲ್ಲಿ ಒದಗಿಸದೇ ಬೀದಿ ಬೀದಿಯಲ್ಲಿ ಜನರಿಗೆ ಲಾಠಿ ಪ್ರಹಾರ ಸರಿಯಲ್ಲ. ಮಾಸ್ಕ್ ಸರ್ಕಾರದಿಂದ ಉಚಿತವಾಗಿ ನೀಡಿ. ಕೂಡಲೇ ಜನರ ಪ್ರಾಣ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.


Spread the love

About Laxminews 24x7

Check Also

ಸಿಂಗಾಪುರ್ ಮಾದರಿಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣ ಅಭಿವೃದ್ಧಿ: ರಾಮಲಿಂಗಾ ರೆಡ್ಡಿ

Spread the loveಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು  ಸಿಂಗಾಪುರ್‌ಗಿಂತಲೂ ಉತ್ತಮವಾದ ಅಂತಾರಾಷ್ಟ್ರೀಯ ಬಸ್ ನಿಲ್ದಾಣ ಮಾಡೋದಾಗಿ ಸಾರಿಗೆ ಸಚಿವ ರಾಮಲಿಂಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ