Breaking News

ದೆಹಲಿ ಸಮಾವೇಶಕ್ಕೆ ಹೋಗಿದ್ದವರ ಶೋಧಕ್ಕೆ ಹುಕ್ಕೇರಿ ಪೊಲೀಸರ ಹೊಸ ಐಡಿಯಾ

Spread the love

ಬೆಳಗಾವಿ(ಚಿಕ್ಕೋಡಿ): ದೇಶವನ್ನೇ ತಲ್ಲಣಗೊಳಿಸಿರುವ ಕೊರೊನಾ ಶಂಕಿತರಾದ ದೆಹಲಿ ನಿಜಾಮುದ್ದೀನ್ ಸಮಾವೇಶದ ನಂಟು ಇದ್ದವರ ಪತ್ತೆಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಪೊಲೀಸರು ಹೊಸ ಐಡಿಯಾವೊಂದನ್ನ ಮಾಡಿದ್ದಾರೆ.

ಪೊಲೀಸರು ಗಲ್ಲಿ ಗಲ್ಲಿಗಳಿಗೆ ಹೋಗಿ ಯಾರಾದರೂ ದೆಹಲಿಯ ನಿಜಾಮುದ್ದೀನ್ ಸಮಾವೇಶಕ್ಕೆ ಜಮಾತ್‍ಗೆ ಹೋಗಿ ಬಂದಿದ್ದರೆ ದಯವಿಟ್ಟು ಬಂದು ಮಾಹಿತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹುಕ್ಕೇರಿ ಪಟ್ಟಣದ ತಬ್ಲಿಗ ಸಮಾಜದ ಎರಿಯಾಗಳಿಗೆ ಹೋಗಿ ಪೊಲೀಸರು ಧ್ವನಿ ವರ್ಧಕಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಹುಕ್ಕೇರಿ ಠಾಣೆಯ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಅವರು, ಯಾರಾದರೂ ದೆಹಲಿಗೆ ಹೋಗಿ ಬಂದಿದ್ದರೆ ನಿಮ್ಮ ಮನೆಯವರ ಆರೋಗ್ಯಕ್ಕಾಗಿ ಆದರೂ ಮಾಹಿತಿ ನೀಡಿ ಸ್ವಯಂ ಪ್ರೇರಿತರಾಗಿ ಚಿಕಿತ್ಸೆಗೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ

ಹುಕ್ಕೇರಿ ಪಟ್ಟಣದ ವಿವಿಧ ಗಲ್ಲಿಗಳಿಗೆ ತೆರಳಿ ಅಲ್ಲಿನ ಮಸೀದಿಗಳ ಬಳಿ ಹೋಗಿ ಪೊಲೀಸರು ಮೈಕ್‍ನಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಿಜಾಮುದ್ದೀನ್ ಸಮಾವೇಶದ ನಂಟು ಹೊಂದಿರುವ 5 ಮಂದಿಯನ್ನ ಹುಕ್ಕೇರಿ ಪೊಲೀಸರು ಪತ್ತೆಹಚ್ಚಿದ್ದಾರೆ.


Spread the love

About Laxminews 24x7

Check Also

ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Spread the loveಬೆಳಗಾವಿ: ಮಹಾನಗರ ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿನ  ಆಸ್ತಿಗಳಿಗೆ ಮತ್ತೊಬ್ಬರ ಹೆಸರಿನಲ್ಲಿ ಬಾಂಡ್ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ