Breaking News

ಯುವತಿಯ ಮೊದಲ ವಿಡಿಯೋದಲ್ಲಿ ಬೀದರ್ ಭಾಷೆ ಇದೆ. ನಿನ್ನೆ ಬಿಡುಗಡೆಯಾದ ವಿಡಿಯೋದಲ್ಲಿ ಸುಪೀರಿಯರ್ ಕನ್ನಡ ಭಾಷೆ ಇದೆ.: ಪ್ರಕರಣ ಪಕ್ಕಾ ಪ್ಲಾನ್ ಯತ್ನಾಳ್

Spread the love

ವಿಜಯಪುರ: ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಮುಗಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಸಂಚು ನಡೆದಿದೆ. ಸಿಡಿ ಪ್ರಕರಣದ ಮೂಲಕ ಅವರನ್ನು ಹಣಿಸಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ಹಾಗೂ ಬಿಜೆಪಿಯ ಇಬ್ಬರು ಉನ್ನತ ನಾಯಕರಿದ್ದಾರೆ. ಈ ಇಬ್ಬರು ನಾಯಕರಿಂದಲೇ ಸಿಡಿ ಷಡ್ಯಂತ್ರ ನಡೆದಿದೆ. ಇನ್ನು ಯುವತಿಯ ಮೊದಲ ವಿಡಿಯೋದಲ್ಲಿ ಬೀದರ್ ಭಾಷೆ ಇದೆ. ನಿನ್ನೆ ಬಿಡುಗಡೆಯಾದ ವಿಡಿಯೋದಲ್ಲಿ ಸುಪೀರಿಯರ್ ಕನ್ನಡ ಭಾಷೆ ಇದೆ. ನಿನ್ನೆ ದೂರು ನೀಡಿದ ಕೆಲ ಹೊತ್ತಲ್ಲೇ ಯುವತಿಯ ವಿಡಿಯೋ ಹೇಳಿಕೆ ಬಿಡುಗಡೆಯಾಗಿದೆ. ಒಟ್ಟಾರೆ ಇಡೀ ಸಿಡಿ ಪ್ರಕರಣ ಪಕ್ಕಾ ಪ್ಲಾನ್ ಎಂದು ಆರೋಪಿಸಿದರು.

ಇನ್ನು ಸಿಡಿ ಪ್ರಕರಣವನ್ನು ಎಸ್ ಐ ಟಿಗೆ ವಹಿಸಲಾಗಿದೆ. ಎಷ್ಟರ ಮಟ್ಟಿಗೆ ಪಾರದರ್ಶಕವಾಗಿ ತನಿಖೆ ನಡೆಯುತ್ತೆ ಎಂಬುದು ಗೊತ್ತಿಲ್ಲ. ಕಾರಣ ಎಸ್ ಐ ಟಿ ಓರ್ವ ಅಧಿಕಾರಿ ವಿಜಯೇಂದ್ರ ಪರಮಾಪ್ತ. ಎಸ್ ಐ ಟಿಯಿಂದ ನಡೆಯುವ ಯಾವುದೇ ಕೇಸ್ ತಾರ್ಕಿಕ ಅಂತ್ಯ ಕಂಡಿಲ್ಲ. ಡ್ರಗ್ಸ್ ಕೇಸ್, ಯುವರಾಜನ ಕೇಸ್ ಎಲ್ಲವೂ ಫೇಲ್ ಆಯ್ತು. ಹಾಗಾಗಿ ಸಿಡಿ ಪ್ರಕರಣವನ್ನು ಎಸ್ ಐ ಟಿ ಬದಲು ಸಿಬಿಐಗೆ ವಹಿಸಬೇಕಿತ್ತು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬಿಜೆಪಿ ಟಿಕೆಟ್ : ಶಾಸಕ ಯತ್ನಾಳ್ ಹೊಸ ಬಾಂಬ್!

Spread the loveವಿಜಯಪುರ : ಏಪ್ರಿಲ್ ಒಂಬತ್ತರಂದು ಕರ್ನಾಟಕ ಉಪಚುನಾವಣೆ ನಡೆಯಲಿದ್ದು ಬಾಗಲಕೋಟೆ ಹಾಗೂ ದಾವಣಗೆರೆಯ ದಕ್ಷಿಣ ಕ್ಷೇತ್ರಕ್ಕೆ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ