ಬೆಂಗಳೂರು: ಹೊಸ ಸಚಿವರಿಗೆ ಖಾತೆ ಹಂಚಿಕೆ ಕಸರತ್ತಿನ ಹೊತ್ತಲ್ಲೇ ಇಡೀ ಸಂಪುಟವನ್ನೇ ವಿಸರ್ಜಿಸಿ, ಹೊಸದಾಗಿ ಸಂಪುಟ ರಚಿಸಿ ಅನ್ನೋ ಕೂಗು ಎದ್ದಿದೆ. ಸಂಪುಟ ಪುನಾರಚನೆ ಮಾಡುವುದು ಒಳ್ಳೆಯದು. ಹಳಬರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಆಗ ಮುಂದೆ 150 ಸೀಟು ಬರೋಕೆ ಸಾಧ್ಯ. ಉತ್ತಮ ಆಡಳಿತ ಕೊಡೋಕೆ ಸಾಧ್ಯ ಅಂತ ಶಾಸಕ ತಿಪ್ಪಾರೆಡ್ಡಿ ಆಗ್ರಹಿಸಿದ್ದಾರೆ.ಸಚಿವರಾಗಿ 20 ತಿಂಗಳು ಪೂರೈಸಿದವರನ್ನು ಕೈ ಬಿಡಿ. 32 ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಡಿ ಅಂತ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಆಗ್ರಹಿಸಿದ್ದಾರೆ. ಈ ಮಧ್ಯೆ, ಪ್ರಬಲ ಖಾತೆಗೆ ಹೊಸ ಸಚಿವರು ಪಟ್ಟು ಹಿಡಿದಿರುವಾಗಲೇ, ಹಾಲಿ ಸಚಿವರು ಕೂಡ ತಮ್ಮ ಖಾತೆ ಬದಲಾವಣೆಯ ಟೆನ್ಷನ್ ನಲ್ಲಿದ್ದಾರೆ. ನಾಡಿದ್ದು ಗುರುವಾರ ಖಾತೆ ಹಂಚೋದಾಗಿ ಸಿಎಂ ಹೇಳಿದ್ದಾರೆ. ಇದರ ಮಧ್ಯೆ, ಅಸಮಾಧಾನಿತ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಅರವಿಂದ್ ಬೆಲ್ಲದ್ ಮತ್ತು ತಿಪಟೂರು ಶಾಸಕ ಬಿ.ಸಿ. ನಾಗೇಶ್ ಅವರನ್ನು ಸಿಎಂ ಜೊತೆ ಗೃಹ ಸಚಿವ ಬೊಮ್ಮಾಯಿ ಮಾತನಾಡಿಸಿ ಕಳಿಸಿದ್ದಾರೆ.
