Breaking News

GST ನೋಂದಣಿಗಾಗಿ ಲಂಚ ಸ್ವೀಕರಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ

Spread the love

ಶಿವಮೊಗ್ಗ: ಜಿಎಸ್ ಟಿ ನೋಂದಣಿಗಾಗಿ ಲಂಚ ಸ್ವೀಕರಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಒಬ್ಬಾತ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿರುವ ಘಟನೆ ಭದ್ರಾವತಿಯ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ಮಂಗಳವಾರ ನಡೆದಿದೆ.

ವೇಣು (36) ಎಸಿಬಿ ಬಲೆಗೆ ಬಿದ್ದ ಡಾಟಾ ಎಂಟ್ರಿ ಆಪರೇಟರ್. ಶಾಮಿಯಾನ ಅಂಗಡಿ ಮಾಲೀಕರೊಬ್ಬರ ಜಿಎಸ್ಟಿ ನೋಂದಣಿ ಮಾಡಲು ವೇಣು ಲಂಚ ಕೇಳಿದ್ದು, ಇಂದು 2500 ರೂ. ಹಣ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ಎಸಿಬಿ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ, ಇನ್ಸ್ ಪೆಕ್ಟರ್ ಇಮ್ರಾನ್ ಬೇಗ್, ಸಿಬ್ಬಂದಿಗಳಾದ ವಸಂತ್, ರಘನಾಯ್ಕ್, ನಾಗರಾಜ್, ಸುರೇಂದ್ರ, ಹರೀಶ್, ಯೋಗೇಶ್, ಶ್ರೀನಿವಾಸ್ ದಾಳಿಯಲ್ಲಿ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಕುಡಿದ ಮತ್ತಿನಲ್ಲಿ ಗೆಳಯನನ್ನೇ ಕಲ್ಲು ಎತ್ತಿ ಹಾಕಿ ಕೊಂದ ಸ್ನೇಹಿತರು

Spread the loveಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಭೀಕರ ಕೊಲೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೇ ಸೇರಿ ತನ್ನವನನ್ನೇ ಕಲ್ಲು ಎತ್ತಿಹಾಕಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ