ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಕೌಶಲಾಭಿವೃದ್ಧಿ ಸಚಿವ ನವಾಬ್ ಮಲ್ಲಿಕ್ ಸೋದರಳಿಯ ಸಮೀರ್ ಖಾನ್ ನನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಸಮೀರ್ ಖಾನ್ ಬ್ರಿಟಿಷ್ ಮೂಲದ ಕರಣ್ ಸಜ್ನಾನಿ ಎಂಬಾತನ ಜೊತೆ ಡ್ರಗ್ಸ್ ಗೆ ಸಂಬಂಧಿಸಿದಂತೆ ವ್ಯವಹಾರ ನಡೆಸಿರುವ ಬಗ್ಗೆ ಎನ್ ಸಿಬಿ ವಿಚಾರಣೆ ನಡೆಸಿತ್ತು. ಇದರ ಬೆನ್ನಲ್ಲೇ ಇದೀಗ ಸಮೀರ್ ಬಂಧನವಾಗಿದೆ.
ಕಳೆದ ವಾರವಷ್ಟೇ ಕರಣ್ ಹಾಗೂ ಇಬ್ಬರು ಮಹಿಳೆಯರನ್ನು ಎನ್ ಸಿಬಿ ವಶಕ್ಕೆ ಪಡೆದುಕೊಂಡಿತ್ತು. ಬಂಧಿತರಿಂದ 200ಕೆ.ಜಿ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಬಂಧಿತ ಕರಣ್ ಮಾಹಿತಿ ಮೇರೆಗೆ ಇದೀಗ ಸಮೀರ್ ನನ್ನು ಬಂಧಿಸಲಾಗಿದೆ.
Laxmi News 24×7