Breaking News

ಹೆಚ್​ಡಿಕೆ & ಯಡಿಯೂರಪ್ಪ ಅವರ ವಿರುದ್ಧವೂ ಏಕವಚನದಲ್ಲೇ ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ

Spread the love

ಬೆಂಗಳೂರು: ಮಾಜಿ ಸಿಎಂ ಹೆಚ್​ಡಿಕೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ ಅದರ ಬೆನ್ನಲ್ಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧವೂ ಏಕವಚನದಲ್ಲೇ ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ರೈತ ಹೋರಾಟಗಾರ ಅಂತ ಹಸಿರು ಶಾಲು ಹಾಕಿಕೊಳ್ತಾನೆ. ಬಡವರ ಅಕ್ಕಿಯನ್ನ ಐದು ಕೆ.ಜಿ.ಗೆ ಇಳಿಸಿದ್ದಾನೆ. ಯಾಕೆ ಕಡಿಮೆ ಮಾಡಿದ್ರು, ಏನ್ ಅವರಪ್ಪನ ಮನೆಯಿಂದ ಕೊಡ್ತಿದ್ನಾ.. ಬಡವರ ಪರ ಹೃದಯವೇ ಇಲ್ಲದ ನಿಮ್ಮನ್ನ ಮನುಷ್ಯರು ಅಂತ ಕರೆಯಬೇಕಾ..? ಬಿಎಸ್‌ವೈ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಬಿಎಸ್​ವೈ ವಿರುದ್ಧ ದಾಳಿ ನಡೆಸಿ.. ಈ ಹಿಂದೆ ನಾವು ಕೊಡ್ತಿದ್ದ 8 ಕೆ.ಜಿ. ಅಕ್ಕಿಯನ್ನ 5 ಕೆ.ಜಿ.ಗೆ ಇಳಿಸಿದ್ದಾರೆ. ಇತ್ತ ಇಂದಿರಾ ಕ್ಯಾಂಟೀನ್​ಗಳನ್ನೂ ಮುಚ್ಚಲು ಹೊರಟಿರುವ ಸರ್ಕಾರ ಕ್ಯಾಂಟೀನ್​ಗಳಿಗೆ ನೀಡಲಾಗಿದ್ದ ನೀರಿನ ಸಂಪರ್ಕವನ್ನ ಕಡಿತಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ