Breaking News

ಬೆಳಗಾವಿ: ಹುಲಿಯ ಉಗುರು, ಆನೆ ದಂತದ ಕಡಗ ಮಾರಾಟ, ವ್ಯಕ್ತಿಯ ಬಂಧನ

Spread the love

ಬೆಳಗಾವಿ: ಹುಲಿ ಉಗುರುಗಳು ಮತ್ತು ಆನೆ ದಂತದಿಂದ ಮಾಡಿದ ಕಡಗಗಳನ್ನು ಮಾರುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ.

ನಗರದ ಶಹಾಪುರದ ಕಾಕೇರಿ ಚೌಕ್ ನಿವಾಸಿ ಶ್ರೀರಾಮ ಅರ್ಜುನಸಾ ಬಾಕಳೆ (46) ಬಂಧಿತ. ಅವರಿಂದ 2 ಕಡಗ ಹಾಗೂ 5 ಹುಲಿ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಲ್ಲಿ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮುಂದಿನ ತನಿಖೆಯನ್ನು ಬೆಳಗಾವಿ ಎಸಿಎಫ್‌ಗೆ ವಹಿಸಲಾಗಿದೆ ಎಂದು ದಳದ ಪ್ರಕಟಣೆ ತಿಳಿಸಿದೆ.


Spread the love

About Laxminews 24x7

Check Also

ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಪೂರೈಕೆ ಆಗಿಲ್ಲ

Spread the loveಬೆಳಗಾವಿ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಆಗಿಲ್ಲ, ಅವಧಿ ಮುಗಿದ ಆಹಾರವನ್ನು ಪೂರೈಕೆ ಮಾಡಿಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ