Breaking News

ವಾಶಿಂಗ್ ಮಷಿನ್ ರಿಪೇರಿ ನೆಪದಲ್ಲಿ ಮಹಿಳೆಯ ಮೇಲೆ  ಮಾರಣಾಂತಿಕ ಹಲ್ಲೆ

Spread the love

ಬೆಳಗಾವಿ:  ವಾಶಿಂಗ್ ಮಷಿನ್ ರಿಪೇರಿ ಮಾಡುವ ನೆಪದಲ್ಲಿ  ಮನೆಗೆ ಬಂದು ಮಹಿಳೆಯ ಮೇಲೆ  ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದ  ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಕಂಗ್ರಾಳಿ ಕೆ.ಎಚ್. ವಿಶಾಲ ಗಲ್ಲಿಯ ಮಾರುತಿ ಪರಶುರಾಮ ಜಾಧವ (೨೬), ವೈಭವ ನಗರದ ಶುಭಂ ರಾಜು ಬಾತಖಂಡೆ (೨೫) ಬಂಧಿತರು.

 ನ. 30 ರಂದು ರಾತ್ರಿ 9 ಗಂಟೆಗೆ ಶಿವಾಜಿ ನಗರದ ಶೋಭಾ ಗುರುರಾವ್ ಕಾಥವಟೆ ಎಂಬುವವರ ಮನೆಗೆ ವಾಶಿಂಗ್ ಮಶಿನ್ ರಿಪೇರಿ  ಮಾಡುವುದಾಗಿ  ಬಂಧಿತ ಇಬ್ಬರು ಆಗಮಿಸಿದ್ದು, ಶೋಭಾ ಅವರ ಬಾಯಿ ಮುಚ್ಚಿ ಹಲ್ಲೆ ಮಾಡಿದ್ದಾರೆ. ಕೊರಳಲ್ಲಿಯ ಬಂಗಾರದ ಮಂಗಳಸೂತ್ರ, ಬಂಗಾರದ ಚೈನ್, ಬಂಗಾರದ ಬಳೆಗಳನ್ನು ಅಪಹರಿಸಿದ್ದಾರೆ.

ಶೋಭಾ ಅವರ ಪತಿ ಗುರುರಾವ ಕಾಥವಟೆ ಅವರ ತಲೆ ಜಜ್ಜಿ  ಗಾಯಗೊಳಿಸಿದ್ದರು. ಅವರ ಕೊರಳಲ್ಲಿಯ ಬಂಗಾರದ ಚೈನ್, ಕೈಬೆರಳಲ್ಲಿಯ ಬಂಗಾರದ ಉಂಗುರ ಹಾಗೂ 25 ಸಾವಿರ ರೂ.ನಗದು ತೆಗೆದುಕೊಂಡು ಪರಾರಿಯಾಗಿದ್ದರು. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರು ಆಧರಿಸಿ ಆರೋಪಿತರನ್ನು ಪೊಲೀಸರು ಬಂಧಿಸಿದ್ದು,  3.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ