Breaking News

ಮಂಗಳಮುಖಿಯರಿಬ್ಬರು ಹಣಕ್ಕಾಗಿ ಅಪರಿಚಿತ ವ್ಯಕ್ತಿಯೊಂದಿಗೆ ಓರಲ್ ಸೆಕ್ಸ್ ಮಾಡುವಂತೆ 14 ವರ್ಷದ ಬಾಲಕನಿಗೆ ಕಿರುಕುಳ

Spread the love

ಚೆನ್ನೈ: ಮಂಗಳಮುಖಿಯರಿಬ್ಬರು ಹಣಕ್ಕಾಗಿ ಅಪರಿಚಿತ ವ್ಯಕ್ತಿಯೊಂದಿಗೆ ಓರಲ್ ಸೆಕ್ಸ್ ಮಾಡುವಂತೆ 14 ವರ್ಷದ ಬಾಲಕನಿಗೆ ಕಿರುಕುಳ ನೀಡಿ ವಿಕೃತಿ ಮೆರೆದಿದ್ದಾರೆ.ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಅಪರ್ಣ(32) ಹಾಗೂ ಸತ್ಯ(30) ಎಂದು ಗುರುತಿಸಲಾಗಿದೆ. ಇಬ್ಬರೂ ಕೂತೂರು ಮೂಲದವರಾಗಿದ್ದಾರೆ. ಬಾಲಕ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತ ಹುಡುಗ ಒಂದು ವಾರದ ಹಿಂದೆ ದಿಂಡಿಗಲ್‍ನ ಬಸ್ ನಿಲ್ದಾಣದಲ್ಲಿ ಅಪರ್ಣ ಹಾಗೂ ಸತ್ಯ ಅವರನ್ನು ಭೇಟಿಯಾಗಿದ್ದ. ಈ ವೇಳೆ ಬಾಲಕ ಇಬ್ಬರ ಜೊತೆ ಸ್ವಲ್ಪ ಹೊತ್ತು ಮಾತನಾಡಿದ್ದಾನೆ. ತನ್ನ ಫೋನ್ ನಂಬರ್‍ನ್ನು ಸಹ ಅವರೊಂದಿಗೆ ಹಂಚಿಕೊಂಡಿದ್ದಾನೆ. ಬಳಿಕ ಇಬ್ಬರೂ ಕರೆ ಮಾಡಿ ತಿರುಚ್ಚಿಗೆ ಬರುಲು ಹೇಳಿದ್ದಾರೆ. ಅಲ್ಲದೆ ಲೈಂಗಿಕತೆ ಶಸ್ತ್ರಚಿಕಿತ್ಸೆ ಮಾಡಿಸಲು ಸಹಾಯ ಮಾಡುತ್ತೇವೆ ಎಂದು ಬರಲು ಹೇಳಿದ್ದಾರೆ.

 

 

ಬಳಿಕ ಬಾಲಕ ನವೆಂಬರ್ 25ರಂದು ತಿರುಚ್ಚಿಗೆ ತೆರಳಿದ್ದು, ಈ ವೇಳೆ ಅಪರ್ಣ ಹಾಗೂ ಸತ್ಯ ಬಾಲಕನಿಗೆ ಮದ್ಯ ಕುಡಿಸಿದ್ದಾರೆ. ಬಳಿಕ ಹಣಕ್ಕಾಗಿ ಅಪರಿಚಿತನೊಂದಿಗೆ ಓರಲ್ ಸೆಕ್ಸ್ ಮಾಡುವಂತೆ ಕಿರುಕುಳ ನೀಡಿದ್ದಾರೆ.

ಬಾಲಕ ನೀಡಿದ ದೂರಿನನ್ವಯ ಪೊಲೀಸರು ಕ್ರಮ ಕೈಗೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಕ್ಸೊ ಕಾಯ್ದೆ ಸೆಕ್ಷನ್ 12 ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣಾ ಕಾಯ್ದೆ ಅಡಿ ಪ್ರಕಣ ದಾಖಲಿಸಿದ್ದಾರೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ