Breaking News

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾಗಳತ್ತ ಮುಖ

Spread the love

ಬೆಂಗಳೂರು: ಸಹೋದರ ಚಿರಂಜೀವಿ ಸರ್ಜಾ ಅಗಲಿಕೆಯ ಬಳಿಕ ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇಂದು ಹೊಸ ಸಿನಿಮಾವೊಂದಕ್ಕೆ ಮುಹೂರ್ತ ನೆರವೇರಿಸಿದ್ದಾರೆ.

ಹೌದು. ಧ್ರುವ ನಟನೆಯ ಹೊಸ ಸಿನಿಮಾ ‘ದುಬಾರಿ’ಯ ಚಿತ್ರೀಕರಣ ಆರಂಭವಾಗಲಿದೆ. ಇಂದು ಬೆಳಗ್ಗೆ ಬೆಂಗಳೂರಿನ ನವರಂಗ್ ಬಳಿ ಇರುವ ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ಪೂಜೆ ನೆರವೇರಿಸಿದ್ದಾರೆ.

ಮುಹೂರ್ತ ಪೂಜೆಯಲ್ಲಿ ನಟ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್, ನಟಿ ತಾರಾ, ದೊಡ್ಡಣ್ಣ ಹಾಗೂ ಪ್ರಥಮ ಪಾಲ್ಗೊಂಡಿದ್ದರು. ಪೊಗರು ಚಿತ್ರದ ನಂತರ ಹೊಸ ಸಿನಿಮಾದ ಪೂಜೆಯನ್ನು ಸರಳವಾಗಿ ಚಿತ್ರತಂಡದ ಜೊತೆ ಮಾಡಿದ್ದಾರೆ. ಹೊಸ ಸಿನಿಮಾ ದುಬಾರಿ ಸೆಟ್ಟೇರಲಿದ್ದು, ಈ ಚಿತ್ರಕ್ಕೆ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಮುಹೂರ್ತದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧ್ರುವ, ಇದು ನನ್ನ 5ನೇ ಸಿನಿಮಾವಾಗಿದೆ. ಸಿನಿಮಾ ಹೆಸರು ದುಬಾರಿ ಎಂದಾಗಿದ್ದು, ಇದರಲ್ಲಿ ಪೊಗರು ಸಿನಿಮಾದ ಟೆಕ್ನಿಷಿಯನ್ಸ್ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟು ಸೇರಿ ಒಂದು ಹೊಸ ಸಿನಿಮಾ ಮಾಡ್ತಿದ್ದೀವಿ. ಮುಖ್ಯಪಾತ್ರದಲ್ಲಿ ದೊಡ್ಡಣ್ಣ ಅಪ್ಪಾಜಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ತಾರಾಮ್ಮ, ಚಂದನ್ ಶೆಟ್ಟಿ ಮೊದಲಾದವರು ಅಭಿನಯಿಸಲಿದ್ದಾರೆ. 10 ದಿನದಲ್ಲಿ ಫೋಟೋ ಶೂಟ್ ಇದ್ದು, ಗೆಟಪ್ ಚೇಂಜ್ ಇರುತ್ತೆ. ಡಿಸೆಂಬರ್ ಫಸ್ಟ್ ನಿಂದ ಶೂಟಿಂಗ್ ಆರಂಭವಾಗಲಿದೆ ಎಂದರು.


Spread the love

About Laxminews 24x7

Check Also

ಕಬ್ಬಿನ ಬಿಲ್ ಬಾಕಿಗಾಗಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಎದುರು ರೈತ ಪ್ರತಿಭಟನೆ

Spread the loveಬೆಳಗಾವಿ: ಪ್ರಸಕ್ತ ಸಾಲಿನ ಕಬ್ಬಿನ ಬಿಲ್ ಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶುಕ್ರವಾರ ಮಹಾನಗರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ