Breaking News

ಕೋವಿಡ್ -19 ರ ಸಂಕಷ್ಟದ ಸಂದರ್ಭದಲ್ಲಿ ವಿರೇಶ್ ಕಿವಡಸಣ್ಣವರ್ ಯಾವುದೇ ಪ್ರಚಾರ ಬಯಸದೆ ಸೈಲೆಂಟ್ ಆಗಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ.

Spread the love

ಬೆಳಗಾವಿ : ಸಮರ್ಥನಂ ಅಂಥ ಮಕ್ಕಳ ಸಂಸ್ಥೆ ಮತ್ತು ಸಮೃದ್ಧಿ ಸೇವಾ ಸಂಸ್ಥೆಯ ಮುಖ್ಯಸ್ಥ ವಿರೇಶ ಕಿವಡಸಣ್ಣವರಗೆ ಜಿಲ್ಲಾಡಳಿತ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಕೋವಿಡ್ -19 ರ ಸಂಕಷ್ಟದ ಸಂದರ್ಭದಲ್ಲಿ ವಿರೇಶ್ ಕಿವಡಸಣ್ಣವರ್ ಯಾವುದೇ ಪ್ರಚಾರ ಬಯಸದೆ ಸೈಲೆಂಟ್ ಆಗಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ. ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿ ಮೂಲೆ ಮೂಲೆಗೆ ತೆರಳಿ ಅಗತ್ಯ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಜನರಿಗೆ ಕೊರೊನಾ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದಾರೆ.

ಜಿಲ್ಲಾಡಳಿತ, ಭಾರತೀಯ ಜನತಾ ಪಾರ್ಟಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳ ಜೊತೆ ಸೇರಿಕೊಂಡು ಹಗಲಿರುಳು ಸೇವೆ ಮಾಡಿದ್ದಾರೆ. ಅವರ ಈ ಎಲ್ಲ ಕಾರ್ಯಗಳನ್ನು ಪರಿಗಣಿಸಿ ಜಿಲ್ಲಾಡಳಿತ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.


Spread the love

About Laxminews 24x7

Check Also

ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ.

Spread the love ಹುಕ್ಕೇರಿ : ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ