Breaking News
Home / ಅಂತರಾಷ್ಟ್ರೀಯ / ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ಸರ್ಜಾ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ಸರ್ಜಾ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

Spread the love

ಬೆಂಗಳೂರು: ಅಕಾಲಿಕ ಮೃತ್ಯವಿಗೀಡಾದ ಸ್ಯಾಂಡಲ್​ವುಡ್​ ನಾಯಕ ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ಸರ್ಜಾ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇಂದು ನಗರದ KR ರಸ್ತೆಯ ಅಕ್ಷ ಆಸ್ಪತ್ರೆಯಲ್ಲಿ ನಟಿ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇನ್ನು ಇತ್ತ ಸರ್ಜಾ ಕುಟುಂಬದಲ್ಲಿ ಸಂತೋಷ ಸಂಭ್ರಮ ರಾರಾಜಿಸುತ್ತಿದೆ. ಅಣ್ಣ ಚಿರಂಜೀವಿ ಸರ್ಜಾ.. ಜೂನಿಯರ್ ಚಿರು ರೂಪದಲ್ಲಿ ಬಂದೇಬರುತ್ತಾನೆ ಎಂದು ಇಡೀ ಸರ್ಜಾ ಕುಟುಂಬ ಅಪಾರ ನಿರೀಕ್ಷೆಯೊಂದಿಗೆ ಕಾದುಕುಳಿತಿತ್ತು. ಧ್ರುವ ಸರ್ಜಾ ಹಾಗು ಪತ್ನಿ ಪ್ರೇರಣಾ ಹಾಗೂ ಚಿರು ತಾಯಿ ಅಮ್ಮಾಜಿ ಮೂರು ದಿನದಿಂದ ಮಗುವಿನ ನಿರೀಕ್ಷೆಯಲ್ಲಿ ಆಸ್ಪತ್ರೆಯಲ್ಲೇ ಇದ್ದಾರೆ. ಆಸ್ಪತ್ರೆ ಮುಂದೆ ಜಮಾಯಿಸಿರುವ ಚಿರು ಫ್ಯಾನ್ಸ್​ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಇಂದು ಚಿರಂಜೀವಿ ಸರ್ಜಾ ಮತ್ತು ಮೇಘನಾ ಜೋಡಿಯ ಎಂಗೇಜ್ಮೆಂಟ್​ ಡೇ ಕೂಡ ಆಗಿದೆ. 2018ರ ಮೇ 2ರಂದು ಚಿರಂಜೀವಿ ಸರ್ಜಾ ಮತ್ತು ಮೇಘನಾ ವಿವಾಹ ನಡೆದಿತ್ತು. 39 ವರ್ಷದ ಚಿರಂಜೀವಿ ಸರ್ಜಾ ಜೂನ್ 7ರಂದು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು.

          


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ