Breaking News

ಬಾವಿಯಲ್ಲಿ ಆಶ್ರಯ ಪಡೆದಿದ್ದ ಮೊಸಳೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ

Spread the love

ಮೈಸೂರು: ಬಾವಿಯಲ್ಲಿ ಆಶ್ರಯ ಪಡೆದಿದ್ದ ಮೊಸಳೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಸುರಕ್ಷಿತ ಜಾಗಕ್ಕೆ ಬಿಟ್ಟ ಘಟನೆ ಮೈಸೂರು ಜಿಲ್ಲೆಯ ಸಿ ಬಿ ಹುಂಡಿ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಸಿ ಬಿ ಹುಂಡಿ ಗ್ರಾಮದ ಜಮೀನಿನ‌ ಬಾವಿಯಲ್ಲಿ ಈ ಮೊಸಳೆ ಸೇರಿಕೊಂಡಿತ್ತು. 15 ರಿಂದ 20 ಅಡಿ ಆಳದ ಬಾವಿಯಲ್ಲಿ ಮೊಸಳೆ ಸೇರಿಕೊಂಡಿತ್ತು. ಈ ಮೊಸಳೆ ಬರೋಬ್ಬರಿ 750 ಕೆಜಿ ತೂಕದ ಹೊಂದಿತ್ತು.

ಸುಮಾರು 15ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಸೆರೆ ಹಿಡದ ಮೊಸಳೆಯನ್ನು ರಂಗನತಿಟ್ಟು ಪಕ್ಷಿಧಾಮದ ಕಾವೇರಿ‌ ನದಿಗೆ ಬಿಡಲು ತೀರ್ಮಾನ ಮಾಡಲಾಗಿದೆ.


Spread the love

About Laxminews 24x7

Check Also

ಮಹಿಳೆಗೆ ನರಕಯಾತನೆ : 12 ವರ್ಷ ಬಳಿಕ ವೈದ್ಯನ ಕರಾಳ ಮುಖ ಬಯಲು ಮಾಡಿದ ಪತ್ನಿ

Spread the loveಮೈಸೂರು: ಪ್ರೀತಿಯ ನಾಟಕವಾಡಿ, ಆತ್ಮತ್ಯೆಯ ಬೆದರಿಕೆ ಹಾಕಿ, ಅಮಾಯಕ ಹೆಣ್ಮಕ್ಕಳ ಬದುಕನ್ನು ನರಕವಾಗಿಸ್ತಿದ್ದ ಕಾಮುಕ ವೈದ್ಯನ ಕರಾಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ