Breaking News

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯಬೇಕೆಂಬುದು ಭಾರತದ ದಶಕಗಳ ಕನಸು.

Spread the love

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯಬೇಕೆಂಬುದು ಭಾರತದ ದಶಕಗಳ ಕನಸು. ಆ ಕನಸು ಇದೀಗ ನನಸಾಗುವ ಸಾಧ್ಯತೆ ಬಹುತೇಕ ಖಚಿತ ಎನ್ನುವಂತಾಗಿದೆ.

ಭದ್ರತಾ ಮಂಡಳಿಯ ಶಾಶ್ವತ್ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಹಾಗೂ ಅಮೆರಿಕ ಇವೆ. ಈ ದೇಶಗಳ ಪೈಕಿ ಚೀನಾ ಹೊರತಾಗಿ ಮಿಕ್ಕೆಲ್ಲ ದೇಶಗಳು ಭಾರತದ ಖಾಯಂ ಸ್ಥಾನಕಕೆ ಬೆಂಬಲ ಸೂಚಿಸಿವೆ ಎಂದು ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ ಮುರಳೀಧರನ್ ಮಾಹಿತಿ ನೀಡಿದ್ದಾರೆ.

ಶಾಶ್ವತ ಸ್ಥಾನಕ್ಕಾಗಿ ಮನವಿ ಮಾಡುತ್ತಲೇ ಇದೆ ಭಾರತ
ಇನ್ನು ಭಾರತ ದೇಶ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ದಶಕಗಳಿಂದಲೂ ಮನವಿ ಮಾಡುತ್ತಿದೆಯಾದರೂ ಈವರೆಗೂ ಆ ಅವಕಾಶ ಸಿಕ್ಕಿಲ್ಲ.

ಈವರೆಗೆ 7 ಬಾರಿ ತಾತ್ಕಾಲಿಕ ಸದಸ್ಯತ್ವ
ಭಾರತ ಶಾಶ್ವತ ಸದಸ್ಯತ್ವ ಪಡೆದಿಲ್ಲವಾದರೂ ಈವರೆಗೂ 7 ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಪಡೆದಿದೆ


Spread the love

About Laxminews 24x7

Check Also

ಭಾರತದಲ್ಲಿ ಗ್ಯಾಸ್ ಎಮರ್ಜೆನ್ಸಿ; ತೈಲ, ವಿದೇಶಾಂಗ ಸಚಿವರ ಜೊತೆ ಮೋದಿ ಸಭೆ

Spread the loveನವದೆಹಲಿ: ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಸಂಘರ್ಷದಿಂದ ಉಂಟಾದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ