Breaking News

ದೇಶದಲ್ಲೀಗ 50 ಲಕ್ಷ ಕೊರೋನಾ ಸೋಂಕಿತರು!

Spread the love

ನವದೆಹಲಿ : ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳು ಭಾರತದಲ್ಲಿ ಮಂಗಳವಾರ 50 ಲಕ್ಷದ ಗಡಿ ದಾಟಿವೆ. ಈ ಮೂಲಕ ಅಮೆರಿಕ ಬಳಿಕ 50 ಲಕ್ಷ ಪ್ರಕರಣಗಳು ದಾಖಲಾದ ಎರಡನೇ ದೇಶ ಭಾರತವಾಗಿದೆ.

ಮಂಗಳವಾರ 90,417 ಕೊರೋನಾ ವೈರಸ್‌ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 50.05 ಲಕ್ಷಕ್ಕೆ ಏರಿಕೆ ಆಗಿದೆ. 67.54 ಲಕ್ಷ ಸೋಂಕಿತರೊಂದಿಗೆ ಅಮೆರಿಕ ಅಗ್ರ ಸ್ಥಾನದಲ್ಲಿದೆ. ಇನ್ನು ಸೋಂಕಿನಿಂದ ಭಾರತದಲ್ಲಿ ಮಂಗಳವಾರ 1282 ಮಂದಿ ಮೃತಪಟ್ಟಿದ್ದು, ಸಾವಿಗೀಡಾದವರ ಒಟ್ಟು ಸಂಖ್ಯೆ 81,989ಕ್ಕೆ ತಲುಪಿದೆ.

ಗುಣಮುಖರು 40 ಲಕ್ಷ ಸನಿಹಕ್ಕೆ:

ಇದೇ ವೇಳೆ ಕೊರೋನಾದಿಂದ ಒಂದೇ ದಿನ 80,502 ಮಂದಿ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 39.26 ಲಕ್ಷಕ್ಕೆ ತಲುಪಿದೆ. ಈ ಮೂಲಕ ಜಾಗತಿಕವಾಗಿ ಅತಿ ಹೆಚ್ಚು ಮಂದಿ ಕೊರೋನಾದಿಂದ ಗುಣಮುಖರಾದ ದೇಶಗಳ ಪೈಕಿ ಭಾರತವೂ ಒಂದೆನಿಸಿದೆ.

ಅಮೆರಿಕದಲ್ಲಿ ಅತಿ ಹೆಚ್ಚು ಅಂದರೆ 40.29 ಲಕ್ಷ ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಇನ್ನು ಭಾರತದಲ್ಲಿ ಕೊರೋನಾ ಚೇತರಿಕೆ ಪ್ರಮಾಣ ಶೇ.78.28ರಷ್ಟಿದೆ. 10 ಲಕ್ಷದಷ್ಟುಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಕ್ರಮವಾಗಿ ಗಾಂಜಾ ಹೊಂದಿದ ವ್ಯಕ್ತಿ ಮನೆ ಮೇಲೆ ದಾಳಿ

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??

 


Spread the love

About Laxminews 24x7

Check Also

ಯತ್ನಾಳ್ ಮತ ಅಸಿಂಧು ಆಕ್ಷೇಪ ತಿರಸ್ಕಾರ – ಮತಗಟ್ಟೆಯಲ್ಲಿ ಉಲ್ಲಂಘನೆ ಆಗಿಲ್ಲ ಎಂದ ಚುನಾವಣಾಧಿಕಾರಿ

Spread the loveಬೆಂಗಳೂರು: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌  ಅವರ ಮತವನ್ನು ಅಸಿಂಧುಗೊಳಿಸಬೇಕೆಂಬ ಕಾಂಗ್ರೆಸ್‌ ಆಕ್ಷೇಪವನ್ನ ಚುನಾವಣಾಧಿಕಾರಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ