Breaking News

ನಟಿ ರಾಗಿಣಿ, ಸಂಜನಾಗೆ ಇಂದು ಸಿಗುತ್ತಾ ಬೇಲ್..​?

Spread the love

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ ಲಿಂಕ್ ಪ್ರಕರಣ ಸಂಬಂಧ ಅರೆಸ್ಟ್​ ಆಗಿರುವ ನಟಿ ರಾಗಿಣಿ, ಸಂಜನಾ ಸೇರಿದಂತೆ ಪ್ರಕರಣದ 5 ಆರೋಪಿಗಳ ಜಾಮೀನು ಅರ್ಜಿಗಳು ಇಂದು ವಿಚಾರಣೆ ಬರಲಿವೆ.

ಸಿಟಿ ಸಿವಿಲ್ ಅವರಣದಲ್ಲಿನ ಎನ್​​​ಡಿಪಿಎಸ್ ನ್ಯಾಯಾಲಯದಲ್ಲಿ ರಾಗಿಣಿ, ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ರಾಹುಲ್ ತೋಷೆ, ವೈಭವ್ ಜೈನ್ ಹಾಗೂ ವಿನಯ್ ಕುಮಾರ್​​​ನ ಅರ್ಜಿಗಳ ವಿಚಾರಣೆ ನಡೆಯಲಿದೆ.

ರಾಗಿಣಿ ಹಾಗೂ ರಾಹುಲ್ ಸಾಮಾನ್ಯ ಜಾಮೀನು ಅರ್ಜಿ ಸಲ್ಲಿಸಿದ್ರೆ, ಶಿವಪ್ರಕಾಶ್, ವೈಭವ್ ಜೈನ್ ಹಾಗೂ ವಿನಯ್‌ ಕುಮಾರ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಈಗಾಗಾಲೇ ವೈಭವ್ ಜೈನ್ ಅರೆಸ್ಟ್ ಆಗಿದ್ದು ನೀರಿಕ್ಷಣಾ ಜಾಮೀನು ಅರ್ಜಿ ವಜಾ ಆಗಲಿದೆ. ಸರ್ಕಾರಿ ವಕೀಲರು ಎಲ್ಲಾ ಅರ್ಜಿಗಳಿಗೂ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳುವ ಸಾಧ್ಯತೆ ಇದೆ. ಇದೇ ವೇಳೆ ರಾಗಿಣಿ ಹಾಗೂ ರಾಹುಲ್‌ ವಕೀಲರು ‌ಮಧ್ಯಂತರ ಜಾಮೀನಿಗಾಗಿ ವಾದಿಸಲು ತಯಾರಿ ಮಾಡಿಕೊಂಡಿದ್ದಾರೆ. ಆದ್ರೆ ಎನ್​ಡಿಪಿಎಸ್​ ಕೇಸ್​​ನಲ್ಲಿ ಮಧ್ಯಂತರ ಜಾಮೀನು ನೀಡದಂತೆ ವಾದಿಸಿಲು ಸರ್ಕಾರಿ ವಕೀಲರು ಸಿದ್ಧತೆ ನಡೆಸಿದ್ದಾರೆ.


Spread the love

About Laxminews 24x7

Check Also

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ

Spread the loveಕಾರವಾರ: ತಾಲೂಕಿನ ತಲಾಂದ ಸಾರ್ವಜನಿಕ ಗಣೇಶೋತ್ಸವ  ಸಮಿತಿಯ ವತಿಯಿಂದ ಬುಧವಾರ ರಾತ್ರಿ ಆಯೋಜಿಸಲಾಗಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ