Breaking News

ಕ್ಯಾಸಿನೋಗೆ ನಾನೊಬ್ಬನೇ ಹೋಗಿಲ್ಲ.28 ಮಂದಿ ಶಾಸಕರು ಮತ್ತು ಕುಮಾರಸ್ವಾಮಿ ಅವರ ಜೊತೆಯೂ ಹೋಗಿದ್ದೇನೆ.

Spread the love

ಬೆಂಗಳೂರು,ಸೆ.12- ನಾನು ಕೊಲೊಂಬೊಗೆ ಹೋಗಿದ್ದೇನೆ. ಕ್ಯಾಸಿನೋದಲ್ಲೂ ಭಾಗವಹಿಸಿದ್ದೇನೆ. ಅದೇನೂ ಅಕ್ರಮ ಚಟುವಟಿಕೆಯಲ್ಲ. ಡ್ರಗ್ಸ್ ಜಾಲದಲ್ಲಿ ನಾನು ಭಾಗವಹಿಸಿದ್ದರೆ ನನ್ನನ್ನು ಗಲ್ಲಿಗೇರಿಸಲಿ ಎಂದು ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಸಿನೋ ಅಕ್ರಮವಲ್ಲ. ಕೇಂದ್ರ ಸರ್ಕಾರ ಅದನ್ನು ನಿಷೇಧಿಸಿಲ್ಲ. ನಾನು ಸೇರಿದಂತೆ ಬಹಳಷ್ಟು ರಾಜಕಾರಣಿಗಳು

 

ಜೆಡಿಎಸ್‍ನಲ್ಲಿದ್ದಾಗ 28 ಮಂದಿ ಶಾಸಕರು ಮತ್ತು ಕುಮಾರಸ್ವಾಮಿ ಅವರ ಜೊತೆಯೂ ಹೋಗಿದ್ದೇನೆ. ಹೋಗಬಾರದೆಂದು ಯಾವ ನಿಯಮವೂ ಇಲ್ಲ. ನಾನೇನೂ ಪಾಕಿಸ್ತಾನಕ್ಕೆ ಹೋಗಿಲ್ಲ. ನಮಗಿಂತಲೂ ಬಿಜೆಪಿಯವರೇ ಹೆಚ್ಚು ಮಂದಿ ಕ್ಯಾಸಿನೋಗೆ ಹೋಗುತ್ತಿದ್ದಾರೆ ಎಂದು ಹೇಳಿದರು.  ನಾನು ವರ್ಷಕ್ಕೊಮ್ಮೆ ಮತ್ತು ಸಮಯ ಸಿಕ್ಕಾಗಲೆಲ್ಲ ಕ್ಯಾಸಿನೋಗೆ ಹೋಗುತ್ತೇನೆ.

ನನ್ನ ಮೇಲೆ ಪ್ರಶಾಂತ್ ಸಂಬರಗಿ ಆರೋಪ ಮಾಡಿರುವುದು ನಟಿ ಸಂಜನಾ ಜೊತೆ ಹೋಗಿದ್ದೇನೆ ಎಂದು. ನಾನು ಆಕೆಯ ಜೊತೆ ಹೋಗಿಲ್ಲ. ಒಂದು ವೇಳೆ ಹೋಗಿರುವುದನ್ನು ಸಾಬೀತುಪಡಿಸಿದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಸವಾಲು ಹಾಕಿದ್ದೇನೆ. ಕೊಲೊಂಬೊಗೆ ಹೋಗಿಲ್ಲ, ಕ್ಯಾಸಿನೋದಲ್ಲಿ ಭಾಗವಹಿಸಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ಎಂದರು.

ಡ್ರಗ್ಸ್ ಜಾಲದಲ್ಲಿ ನನ್ನ ಪಾತ್ರ ಇಲ್ಲ. ಒಂದು ವೇಳೆ ನಾನು ಭಾಗವಹಿಸಿರುವುದು ಸಾಬೀತಾದರೆ ತಕ್ಷಣವೇ ನನ್ನನ್ನು ಗಲ್ಲಿಗೇರಿಸಲಿ ಹಾಗೆಂದು ನ್ಯಾಯಾಧೀಶರ ಮುಂದೆ ನಾನು ಬರೆದುಕೊಡುತ್ತೇನೆ. ಯಾವುದೇ ರಾಜಕಾರಣಿಯಾಗಲಿ ಡ್ರಗ್ಸ್ ಜಾಲದಲ್ಲಿ ಭಾಗವಹಿಸಿದ್ದರೂ ಅವರನ್ನು ಗಲ್ಲಿಗೇರಿಸಲಿ ಎಂದು ಹೇಳಿದರು.

ಕ್ಯಾಸಿನೋಗೆ ಹೋಗಿದ್ದಾರೆ. ನಾನೊಬ್ಬನೇ ಹೋಗಿಲ್ಲ.

 


Spread the love

About Laxminews 24x7

Check Also

ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..!

Spread the loveಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..! ಉತ್ತರ ಪ್ರದೇಶದ ಬದೋಹಿಯಲ್ಲೊಂದು ಪುಟ್ಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ