Breaking News

T20: ಡೇವಿಡ್‌ ಮಾಲನ್‌ ನಂ.1 ಬ್ಯಾಟ್ಸ್‌ಮನ್‌

Spread the love

ದುಬಾೖ: ಇಂಗ್ಲೆಂಡಿನ ಡೇವಿಡ್‌ ಮಾಲನ್‌ ಟಿ20 ಕ್ರಿಕೆಟಿನ ನೂತನ ನಂಬರ್‌ ವನ್‌ ಬ್ಯಾಟ್ಸ್‌ಮನ್‌ ಆಗಿ ಮೂಡಿಬಂದಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಮಿಂಚಿದ ಮಾಲನ್‌ 4 ಸ್ಥಾನ ಮೇಲೇರಿ ಮೊದಲ ಸಲ ಅಗ್ರಸ್ಥಾನದ ಗೌರವ ಸಂಪಾದಿಸಿದರು. ಕಳೆದ ನವೆಂಬರ್‌ನಲ್ಲಿ ನಂ.2 ಎನಿಸಿದ್ದು ಮಾಲನ್‌ ಅವರ ಈವರೆಗಿನ ಅತ್ಯುತ್ತಮ ರ್‍ಯಾಂಕಿಂಗ್‌ ಆಗಿತ್ತು.

ಇದರಿಂದ ಪಾಕಿಸ್ಥಾನದ ಬಾಬರ್‌ ಆಜಂ ಅವರಿಗೆ ನಂ.1 ಸ್ಥಾನ ನಷ್ಟವಾಯಿತು. ಅವರೀಗ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ. ದ್ವಿತೀಯ ಸ್ಥಾನದಲ್ಲಿದ್ದ ಕೆ.ಎಲ್‌. ರಾಹುಲ್‌ 4ಕ್ಕೆ ಕುಸಿದಿದ್ದಾರೆ. ವಿರಾಟ್‌ ಕೊಹ್ಲಿ ಅವರದು ಒಂದು ಸ್ಥಾನದ ಪ್ರಗತಿಯಾಗಿದೆ (9). ಇವರಿಬ್ಬರನ್ನು ಹೊರತುಪಡಿಸಿ ಟಾಪ್‌-10 ಬ್ಯಾಟಿಂಗ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ಭಾರತದವರ್ಯಾರೂ ಇಲ್ಲ.

ಟಿ20 ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಫ್ಘಾನಿಸ್ಥಾನದ ಸ್ಪಿನ್ನರ್‌ಗಳಾದ ರಶೀದ್‌ ಖಾನ್‌ ಮತ್ತು ಮುಜೀಬ್‌ ಉರ್‌ ರೆಹಮಾನ್‌ ಮೊದಲೆರಡು ಸ್ಥಾನ ಅಲಂಕರಿಸಿದ್ದಾರೆ.

ತಂಡ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯ (275), ಇಂಗ್ಲೆಂಡ್‌ (271) ಮತ್ತು ಭಾರತ (266) ಮೊದಲ 3 ಸ್ಥಾನದಲ್ಲಿವೆ.


Spread the love

About Laxminews 24x7

Check Also

ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ

Spread the loveನವದೆಹಲಿ: ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್  ಅವರನ್ನ ಕೇಂದ್ರ ಸರ್ಕಾರ ನೇಮಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ