Breaking News

8 ಐಪಿಎಸ್ ಅಧಿಕಾರಿಗಳ ಟ್ರಾನ್ಸ್ ಫರ್; ಡಿವೈಎಸ್‌ಪಿಗಳಿಗೆ ಮುಂಬಡ್ತಿ ನೀಡಿ ವರ್ಗಾವಣೆ

Spread the love

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಡಿವೈಎಸ್‌ಪಿ (ಸಿವಿಲ್) ವೃಂದದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಎಸ್‌.ಪಿ. (ಸಿವಿಲ್, ನಾನ್ ಐಪಿಎಸ್) ವೃಂದಕ್ಕೆ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.

ಎಸ್‌.ಟಿ.ಸಿದ್ದಲಿಂಗಪ್ಪ ಅವರನ್ನು ರಾಜ್ಯ ಗುಪ್ತವಾರ್ತೆ ಪೊಲೀಸ್ ಅಧೀಕ್ಷಕರಾಗಿ, ಮುಹಮ್ಮದ್ ಹುಸೇನ್ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ, ಬಸಪ್ಪ ಎಸ್.ಅಂಗಡಿ ಅವರನ್ನು ಬೆಂಗಳೂರು ನಗರ ಅಪರಾಧ-2ರ ಉಪ ಪೊಲೀಸ್ ಆಯುಕ್ತರಾಗಿ ವರ್ಗಾಯಿಸಲಾಗಿದೆ.

 

ಬಿ.ಎಲ್.ವೇಣುಗೋಪಾಲ್ ಅವರನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ, ಗುರುನಾಥ್ ಬಿ.ಮತ್ತೂರು ಅವರನ್ನು ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕರಾಗಿ,ಸಿ.ಎನ್.ಭೋಪಯ್ಯ ಅವರನ್ನು ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕರಾಗಿ , ಎಂ.ಮಂಜುನಾಥ್ ಅವರನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ವರ್ಗಾಯಿಸಲಾಗಿದೆ.

ಅಂತೆಯೇ ಬೆಂಗಳೂರು ಉತ್ತರ ಸಂಚಾರ ವಿಭಾಗದ ಡಿಸಿಪಿ ಸಾರಾ ಫಾತಿಮಾ ಸೇರಿದಂತೆ 8 ಐಪಿಎಸ್ ಅಧಿಕಾರಿಗಳನ್ನು ಶುಕ್ರವಾರ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಿಡಿಸಿದೆ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ