Breaking News

ಪ್ರಜ್ವಲ್‌ ಕೇಸಲ್ಲಿ ಅಮಿತ್‌ ಶಾ ಅವ್ರೇ ಅವಾರ್ಡ್‌ ಕೊಟ್ಟಿದ್ರು, ಸ್ಟಿಂಗ್‌ ಕೇಸಲ್ಲೂ ಅವಾರ್ಡ್‌ ಸಿಗುತ್ತೆ: ಪ್ರಿಯಾಂಕ್‌ ಖರ್ಗೆ

Spread the love

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಕೇಂದ್ರ ಸರ್ಕಾರವೇ ಕರ್ನಾಟಕ ಪೊಲೀಸರಿಗೆ ಅವಾರ್ಡ್‌ ಕೊಟ್ಟಿದೆ. ಅದೇ ರೀತಿ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲೂ ಅವಾರ್ಡ್‌ ಸಿಗುತ್ತೆ ನೋಡಿ ಅಂತಾ ರಾಜ್ಯ ಗೃಹಸಚಿವ ಪ್ರಿಯಾಂಕ್‌ ಖರ್ಗೆ  ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದ್ರು.

ಪ್ರಜ್ವಲ್ ರೇವಣ್ಣ ಕೇಸಲ್ಲಿ ಕೇಂದ್ರ ಸರ್ಕಾರವೇ ಕರ್ನಾಟಕ ಪೊಲೀಸರಿಗೆ ಅವಾರ್ಡ್ ನೀಡಿದೆ. ಅಮಿತ್ ಶಾ ಅವರೇ ಕರ್ನಾಟಕ ಪೊಲೀಸರ ಒಳ್ಳೆ ಕೆಲಸ ಗುರುತಿಸಿ ಅವಾರ್ಡ್ ನೀಡಿದ್ದಾರೆ. ಸ್ಟಿಂಗ್ ಆಪರೇಷನ್‌ ಪ್ರಕರಣದಲ್ಲೂ ಅವಾರ್ಡ್ ಸಿಗುತ್ತದೆ ನೋಡಿ. ನಿಮ್ಮ ಕೆಟ್ಟ ಕೆಲಸಗಳಿಗೆ ಪುರಸ್ಕಾರ ಸಿಗಲ್ಲ. ನಿಮಗೆ ಅಂಟಿರುವ ಕಳಂಕ ಹೋಗಲ್ಲ. ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಬರುತ್ತಿವೆ ಎಂಬುದನ್ನು ಪೊಲೀಸರು ಹೇಳುವುದು ತಪ್ಪಾ? ಯಾವ ಕಾನೂನು ಉಲ್ಲಂಘನೆ ಮಾಡಿ ಪೊಲೀಸರು ಹೇಳಿಕೆ ನೀಡಿದ್ದಾರೆ? ಯಾವ ಮಾಹಿತಿ ಸೋರಿಕೆ ಆಗಿದೆ ಹೇಳಿ. ಪೊಲೀಸರಿಗೆ ಲಾಠಿ ಕೊಟ್ಟಿರೋದು ಕೋಲಾಟಕ್ಕಾ? ಅಂತಾ ಪ್ರಶ್ನೆ ಮಾಡಿದ್ರು.

ನಾನು ಗೃಹ ಸಚಿವ, ಸಂವಿಧಾನದ ಅಡಿ ಹೆಚ್ಚಿನ ಪವರ್ ಬರಲ್ಲ ನನಗೆ. ಕಾನೂನಿನ ಅಡಿಯಲ್ಲಿ ಏನು ನಿಯಮಗಳು ಇವೆ. ಅದರ ಅಡಿಯಲ್ಲೇ ನಾನು ಕೆಲಸ ಮಾಡಬೇಕು. ಎಷ್ಟೇ ಸಣ್ಣ ಸಾಕ್ಷಿ ಸಿಕ್ಕಿದರೂ ನಾವು ತನಿಖೆ ಮಾಡುತ್ತೇವೆ. ಸಣ್ಣ ಕಾರ್ಯಕರ್ತರೇ ಇರಲಿ ಸಂಸದರೇ ಇರಲಿ ಸಚಿವರೇ ಇರಲಿ ನೊಟೀಸ್ ಕೊಟ್ಟು ಕರೆಸಬೇಕಾದ್ರೆ ಕರೆಸುತ್ತೇವೆ ಎಂದರು.

ರಿತೇಶ್‌ ಪಾಂಡೆಗೆ ಮೊಬೈಲ್ ಕಳಿಸಿದ್ದು ಯಾರು? ಮೊಬೈಲ್ ಎಲ್ಲಿ ಹೋಗಿತ್ತು? ಎಂದ ಸಚಿವರು, ರಿತೇಶ್ ಪಾಂಡೆಯನ್ನ ಗಾಝಿಯಾಬಾದ್ ನಲ್ಲೇ ವಶಕ್ಕೆ ಪಡೆದಿರೋದು. ಕೇಂದ್ರ ಸಚಿವರ ಮನೆಯಲ್ಲಿ ವಶಕ್ಕೆ ಪಡೆದಿದ್ದೇವೆ ಅಂತ ನಾವೆಲ್ಲಿ ಹೇಳಿದ್ದೇವೆ. ಕುಮಾರಸ್ವಾಮಿ ಸ್ಟಿಂಗ್ ಮಾಡಿದವರು ಅಂತ ನಾವೆಲ್ಲಿ ಹೇಳಿದ್ದೇವೆ? ನಿಮ್ಮ ಮನೆಯಲ್ಲಿ ಮೊಬೈಲ್ ಎಕ್ಸಚೇಂಜ್ ಆಗಿದೆಯಾ ಹೇಳಿ ಕುಮಾರಸ್ವಾಮಿ ಯವರೇ? ಟೆಕ್ನಿಕಲ್ ಎವಿಡೆನ್ಸ್ ಗಳನ್ನು ಸೂಕ್ತ ಸಂದರ್ಭದಲ್ಲಿ ನಾವು ಹೊರಗಡೆ ಬಿಡುತ್ತೇವೆ. ನಾವು ಕುಮಾರಸ್ವಾಮಿ ಟಚ್ ಮಾಡ್ತೇವೆ ಅಂತ ಎಲ್ಲಿ ಹೇಳಿದ್ದೇವೆ? ಟಚ್ ಮಿ ಟಚ್ ಮಿ ಅಂತ ಅವರೇ ಹೇಳಿದ್ದಲ್ವಾ? ಅವರೇನು ಆರ್‌ಎಸ್‌ಎಸ್ ಡಿ ಗ್ರೂಪ್ ನೌಕರರಾ? ಅಂತಾ ಕುಟುಕಿದ್ರು.


Spread the love

About Laxminews 24x7

Check Also

ನ.13 ರಂದೇ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ – ತೇಜಸ್ವಿ ಸೂರ್ಯ

Spread the loveಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ ಕುರಿತು ಹೊಸ ಅಪ್ಡೇಟ್‌ ಬಂದಿದೆ. ಬೆಂಗಳೂರು ದಕ್ಷಿಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ