Breaking News

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಸರ್ಕಾರಿ ಗೌರವದೊಂದಿಗೆ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಳುಂಕೆ ಅಂತ್ಯಕ್ರಿಯೆ

Spread the love

ಗ್ರಾಮದಲ್ಲಿರುವ ಅರುಣ್ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು. ಪುತ್ರ ವಲ್ಲಭ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಿಸಿಬಿ ಮುಖ್ಯಸ್ಥ ಅಜಯ್ ಹಿಲೋರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ಇಲಾಖೆಯ ವತಿಯಿಂದ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ಗೋವಾದಿಂದ ಅಥಣಿ ಮಾರ್ಗವಾಗಿ ಅರುಣ್ ಅವರ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಿತು. ಸಾವಿರಾರು ಯುವಕರು ಬೈಕ್ ರ‍್ಯಾಲಿ ಮೂಲಕ ಮೃತದೇಹವನ್ನು ಸ್ವಾಗತಿಸಿ ಗ್ರಾಮಕ್ಕೆ ಕರೆತಂದರು. ಮಾರ್ಗದುದ್ದಕ್ಕೂ ಜನರು ನಿಂತು ಅರುಣ್ ಸಾಳುಂಕೆ ಅವರಿಗೆ ಗೌರವ ಸಲ್ಲಿಸಿದರು.

ನಂತರ ಗ್ರಾಮದ ತೋಟದ ಆವರಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅರುಣ್ ಅವರ ಸ್ನೇಹಿತರು, ಪೊಲೀಸ್ ಬ್ಯಾಚ್‌ನ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಪುತ್ರಿ ದೀಪ ಬೆಳಗಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ತಂದೆಯ ಅಂತಿಮ ದರ್ಶನದ ವೇಳೆ ಕುಟುಂಬದವರ ದುಃಖ ಕಂಡು ನೆರೆದಿದ್ದ ಜನಸ್ತೋಮವೂ ಕಣ್ಣೀರಾಯಿತು.

ಇಲಾಖೆಯಲ್ಲಿ ಅರುಣ್ ಅವರೊಂದಿಗೆ ಕೆಲಸ ಮಾಡಿದ್ದ ಅಧಿಕಾರಿಗಳು ಕೂಡ ತಮ್ಮ ಸಹೋದ್ಯೋಗಿಯನ್ನು ನೆನೆದು ಭಾವುಕರಾದರು. ಸಾವಿರಾರು ಜನರ ಸಮ್ಮುಖದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅರುಣ್ ಸಾಳುಂಕೆ ಅವರಿಗೆ ಅಂತಿಮ ವಿದಾಯ ನೀಡಲಾಯಿತು.


Spread the love

About Laxminews 24x7

Check Also

ನ.13 ರಂದೇ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ – ತೇಜಸ್ವಿ ಸೂರ್ಯ

Spread the loveಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ ಕುರಿತು ಹೊಸ ಅಪ್ಡೇಟ್‌ ಬಂದಿದೆ. ಬೆಂಗಳೂರು ದಕ್ಷಿಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ