Breaking News

ರೇಣುಕಾಸ್ವಾಮಿ ಕೊಲೆ ಪ್ರಕರಣ – ಪಿಎಸ್‌ಐ ವಿನಯ್‌ಗೆ ಸಂಕಷ್ಟ? – ತನಿಖಾ ತಂಡದ ವಿರುದ್ಧವೇ ಇಲಾಖಾ ತನಿಖೆ

Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಬೆನ್ನಲ್ಲೇ ಪಿಎಸ್‌ಐ ವಿನಯ್‌ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ತನಿಖೆಯಲ್ಲಿ ಹಲವು ಸಾಕ್ಷಿಗಳನ್ನ ಸೃಷ್ಟಿಸಲಾಗಿದೆ. ಆರೋಪಿ ಸ್ಥಾನದಿಂದ ಪಿಎಸ್‌ಐ ವಿನಯ್‌ ಅವರನ್ನು ತಪ್ಪಿಸಲಾಗಿದೆ. ಪ್ರಕರಣದಲ್ಲಿ ವಿನಯ್ ಕೂಡ ಭಾಗಿ ಆಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆಯಲ್ಲಿ ಲೋಪ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ದೂರು ಹಿನ್ನೆಲೆ, ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ನೇತೃತ್ವದಲ್ಲಿ ಇಲಾಖಾ ತನಿಖೆಗೆ ಸೂಚನೆ ನೀಡಲಾಗಿದೆ.

ಪಿಎಸ್‌ಐ ಅಣತಿಯಂತೆ ರೇಣುಕಾಸ್ವಾಮಿ ಮೃತದೇಹವನ್ನು  ಆರೋಪಿಗಳು ಬಿಸಾಡಿದ್ದರು ಎನ್ನಲಾಗಿದೆ. ಹೀಗಾಗಿ ವಿನಯ್ ಕೂಡ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಡಿಜಿ&ಐಜಿ ಡಾ. ಎಂ ಸಲೀಂ ಅವರಿಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖಾಧಿಕಾರಿ ಎಸಿಪಿ ಚಂದನ್ ಹಾಗೂ ಪಿಎಸ್‌ಐ ವಿನಯ್ ವಿರುದ್ಧ ಇಲಾಖಾ ತನಿಖೆಗೆ ಸೂಚಿಸಲಾಗಿದೆ.


Spread the love

About Laxminews 24x7

Check Also

ಭಾಲ್ಕಿಯ ಸಹಕಾರಿ ಬ್ಯಾಂಕ್ ಮೇಲೆ ಇಡಿ ದಾಳಿ ಅಂತ್ಯ

Spread the loveಬೀದರ್: ರಾಜ್ಯದಲ್ಲಿ ಭಾರೀ ಸದ್ದು ಮಾಡಿರುವ ಕರ್ನಾಟಕ ಲೋಕಸೇವಾ ಆಯೋಗದ  ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ