ಕಲಬುರಗಿ: ಕರ್ತವ್ಯದಲ್ಲಿದ್ದ ಮಹಾಗಾಂವ್ ಠಾಣೆ ಕಾನ್ಸ್ಟೇಬಲ್ ಒಬ್ಬರು ಮಸೀದಿ ಛಾವಣಿ ನಿಂತು ಬಿಯರ್ ಕುಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ.
ಕಮಲಾಪುರ ತಾಲೂಕಿನ ಮಹಾಗಾಂವ್ ಪೊಲೀಸ್ ಠಾಣೆ ಪೇದೆ ಹಣಮಂತ ಅವರು ಹರಸೂರು ಗ್ರಾಮದ ಮಸೀದಿ ಮೇಲೆ ನಿಂತು ಬಿಯರ್ ಕುಡಿದಿದ್ದರು. ಇದನ್ನು ಗ್ರಾಮಸ್ಥರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋ ವೈರಲ್ ಆದ ಬೆನ್ನಲ್ಲೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ.
ಠಾಣಾ ವ್ಯಾಪ್ತಿಯ ಹರಸೂರು ಗ್ರಾಮದಲ್ಲಿ ಗಲಾಟೆಯಾಗಿತ್ತು. ಆ ಹಿನ್ನಲೆ ಬಂದೋಬಸ್ತ್ಗಾಗಿ ಹಣಮಂತರನ್ನ ನಿಯೋಜನೆ ಮಾಡಲಾಗಿತ್ತು. ಆದರೆ ಕರ್ತವ್ಯದಲ್ಲಿದ್ದಾಗಲೇ ಅವರು ಬಿಯರ್ ಕುಡಿದಿದ್ದರು. ಮಧ್ಯ ಸೇವಿಸಿರೋದು ಧೃಡಪಟ್ಟ ಹಿನ್ನಲೆ ಅಮಾನತು ಮಾಡಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಆದೇಶಿಸಿದ್ದಾರೆ.
Laxmi News 24×7