Breaking News

ಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆ

Spread the love

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ಶನಿವಾರ ಬೆಳಿಗ್ಗೆ ವಶಕ್ಕೆ ಪಡೆದಿದ್ದಾರೆ.

ತಡರಾತ್ರಿಯಿಂದಲೇ ಸುಮಾರು 50ಕ್ಕೂ ಹೆಚ್ಚು ಪೊಲೀಸರು ರಾಠಿ ತಂಗಿದ್ದ ಗುರುಗ್ರಾಮದ ನಿವಾಸದ ಹೊರಗೆ ಕಾವಲು ಕಾಯುತ್ತಿದ್ದರು. ಬೆಳಿಗ್ಗೆ 7:48ರ ಸುಮಾರಿಗೆ ಅವರ ತಾಯಿ ಬಾಗಿಲು ತೆರೆಯುತ್ತಿದ್ದಂತೆ ಮನೆ ಪ್ರವೇಶಿಸಿದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ರಾಠಿ ವಿರುದ್ಧ ದೂರು
ದೆಹಲಿಯಲ್ಲಿ ವಶಕ್ಕೆ ಪಡೆಯುವ ಮುನ್ನವೇ ಧ್ರುವ್ ರಾಠಿ ಅವರ ವಿರುದ್ಧ ಕಾನೂನು ತನಿಖೆಗೆ ಒತ್ತಾಯಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿತ್ತು. ಅಕ್ಟೋಬರ್ 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಟ-ಹೋರಾಟಗಾರ ಪ್ರಕಾಶ್ ರಾಜ್ ಹಾಗೂ ಇತರರೊಂದಿಗೆ ಸೇರಿ ಚುನಾವಣಾ ಆಯೋಗದ ‘ಎಸ್‌ಐಆರ್’ ನಿರ್ಧಾರದ ವಿರುದ್ಧ ನಡೆದ ಪ್ರತಿಭಟನಾ ಸಮಾವೇಶದಲ್ಲಿ ರಾಠಿ ಭಾಗವಹಿಸಿ ಭಾಷಣ ಮಾಡಿದ್ದರು. ಇದು ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿತ್ತು.

ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರು ಕೇಂದ್ರ ಗೃಹ ಕಾರ್ಯದರ್ಶಿಯವರಿಗೆ ಸುದೀರ್ಘ ಪತ್ರ ಬರೆದು, ಧ್ರುವ್ ರಾಠಿ ಅವರ ಪೌರತ್ವ, ಇಮಿಗ್ರೇಷನ್ ಸ್ಥಿತಿ ಹಾಗೂ ವೀಸಾ ನಿಯಮಗಳ ಉಲ್ಲಂಘನೆ ಕುರಿತು ತಕ್ಷಣ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ದೂರಿನಲ್ಲಿ ಏನಿತ್ತು?

ಧ್ರುವ್ ರಾಠಿ ಅವರು ಜರ್ಮನ್ ಪೌರತ್ವ ಹೊಂದಿದ್ದಾರೆ ಎನ್ನಲಾಗಿದ್ದು, ಅವರು ಭಾರತಕ್ಕೆ ಪ್ರವೇಶಿಸಲು ಬಳಸಿದ ಪಾಸ್‌ಪೋರ್ಟ್ ಮತ್ತು ಅವರ ಪ್ರಸ್ತುತ ರಾಷ್ಟ್ರೀಯತೆಯ ವಾಸ್ತವ ಸ್ಥಿತಿಯನ್ನು ಸ್ಪಷ್ಟಪಡಿಸಬೇಕು. ಅವರು ಯಾವ ವರ್ಗದ ವೀಸಾ ಅಥವಾ ಓಸಿಐ ಕಾರ್ಡ್ ಅಡಿಯಲ್ಲಿ ಭಾರತಕ್ಕೆ ಬಂದಿದ್ದಾರೆ ಮತ್ತು ಪ್ರವೇಶದ ವೇಳೆ ಘೋಷಿಸಿದ ಭೇಟಿಯ ಅಧಿಕೃತ ಉದ್ದೇಶವೇನು ಎಂಬುದನ್ನು ಪರಿಶೀಲಿಸಬೇಕು.
ವಿದೇಶಿ ಪ್ರಜೆಯೊಬ್ಬರು ಭಾರತದ ಸಾಂವಿಧಾನಿಕ ಹಾಗೂ ಶಾಸನಬದ್ಧ ಸಂಸ್ಥೆಗಳ ವಿರುದ್ಧ ನಡೆಯುವ ರಾಜಕೀಯ ಸಭೆ-ಪ್ರತಿಭಟನೆಗಳಲ್ಲಿ ಕಾನೂನುಬದ್ಧವಾಗಿ ಭಾಗವಹಿಸಿ ಭಾಷಣ ಮಾಡಲು ಅವಕಾಶವಿದೆಯೇ? ಇದಕ್ಕೆ ಪೂರ್ವಾನುಮತಿ ಪಡೆಯಲಾಗಿದೆಯೇ?

ಒಂದು ವೇಳೆ ಅವರು ‘ವಿದೇಶಿಯರ ಕಾಯ್ದೆ 1946 (Foreigners Act, 1946), ವೀಸಾ ಷರತ್ತುಗಳು, ಇಮಿಗ್ರೇಷನ್ ನಿಯಮಗಳು ಅಥವಾ ಒಸಿಐ (OCI) ಷರತ್ತುಗಳನ್ನು ಉಲ್ಲಂಘಿಸಿದ್ದರೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.


Spread the love

About Laxminews 24x7

Check Also

ಭಾಲ್ಕಿಯ ಸಹಕಾರಿ ಬ್ಯಾಂಕ್ ಮೇಲೆ ಇಡಿ ದಾಳಿ ಅಂತ್ಯ

Spread the loveಬೀದರ್: ರಾಜ್ಯದಲ್ಲಿ ಭಾರೀ ಸದ್ದು ಮಾಡಿರುವ ಕರ್ನಾಟಕ ಲೋಕಸೇವಾ ಆಯೋಗದ  ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ