Breaking News

ಮನೆಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಸಾಕು ನಾಯಿ ದಾಳಿ – ಗಂಭೀರ ಗಾಯ

Spread the love

ಬೆಂಗಳೂರು: ಮನೆಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಸಾಕು ನಾಯಿ  ದಾಳಿ ನಡೆಸಿದ ಪರಿಣಾಮ ಬಾಲಕ ಗಂಭೀರ ಗಾಯಗೊಂಡಿರುವ ಘಟನೆ ನೆಲಮಂಗಲ  ತಾಲೂಕಿನ ದಾಬಸ್ ಪೇಟೆಯ ನಿಡುವಂದದಲ್ಲಿ ನಡೆದಿದೆ.

ಅಕ್ಷಯ್ (14) ನಾಯಿಯಿಂದ ದಾಳಿಗೊಳಗಾದ ಬಾಲಕ. ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅದೇ ಏರಿಯಾದ ನಿವಾಸಿಯೊಬ್ಬರ ಸಾಕು ನಾಯಿ ಬಾಲಕನ ಮೇಲೆ ದಾಳಿ ಮಾಡಿದ್ದು, ಕೈ, ಕಾಲು ಹಾಗೂ ಎದೆಗೆ ಗಂಭೀರ ಗಾಯಗಳಾಗಿವೆ.

ಬಾಲಕ ಗಂಭೀರ ಗಾಯಕ್ಕೊಳಗಾದ ಹಿನ್ನೆಲೆ ಪೋಷಕರಲ್ಲಿ ಆತಂಕ ಮನೆಮಾಡಿದೆ. ಸದ್ಯ ಬಾಲಕನಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಕುಟುಂಬಸ್ಥರು ದಾಬಸ್ ಪೇಟೆ ಠಾಣೆಗೆ ತೆರಳಿ ದೂರು ನೀಡಲಿದ್ದಾರೆ.


Spread the love

About Laxminews 24x7

Check Also

ಭಾಲ್ಕಿಯ ಸಹಕಾರಿ ಬ್ಯಾಂಕ್ ಮೇಲೆ ಇಡಿ ದಾಳಿ ಅಂತ್ಯ

Spread the loveಬೀದರ್: ರಾಜ್ಯದಲ್ಲಿ ಭಾರೀ ಸದ್ದು ಮಾಡಿರುವ ಕರ್ನಾಟಕ ಲೋಕಸೇವಾ ಆಯೋಗದ  ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ