Breaking News

ಪ್ರ‍್ಯಾಕ್ಟಿಸ್‌ಗಾಗಿ ಶ್ವಾನದ ಕಾಲು ಕಟ್ – ಪರಿಶೀಲನೆ ವೇಳೆ ಖಾಸಗಿ ಪಶು ಆಸ್ಪತ್ರೆಯ ಕರ್ಮಕಾಂಡ ಬಯಲು

Spread the love

ಬೆಂಗಳೂರು: ಪ್ರ‍್ಯಾಕ್ಟಿಸ್‌ಗಾಗಿ ಶ್ವಾನದ ಕಾಲು ಕತ್ತರಿಸಿ, ಅನಸ್ತೇಶಿಯಾ ನೀಡದೇ ಪ್ರಾಣಿಗಳ ಪ್ರಯೋಗ ನಡೆಸುತ್ತಿರುವ ಖಾಸಗಿ ಪಶು ಆಸ್ಪತ್ರೆಯ  ಕರ್ಮಕಾಂಡ ಇದೀಗ ಬಯಲಾಗಿದೆ.

ದೊಡ್ಡಕನ್ನೆಲ್ಲಿಯಲ್ಲಿ ಕಳೆದ 4 ವರ್ಷದಿಂದ ಅನುಮತಿಯಿಲ್ಲದೇ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಪಶು ಆಸ್ಪತ್ರೆಗೆ ಅಧಿಕಾರಿಗಳು ತೆರಳಿ, ಪರಿಶೀಲನೆ ನಡೆಸಿದಾಗ ಹಿಂಸಾಚಾರ ನಡೆಸುತ್ತಿರುವುದು ಬಯಲಾಗಿದೆ. ಈ ಆಸ್ಪತ್ರೆ ಬೋರ್ಡಿಂಗ್, ಕೆಎಡಬ್ಲ್ಯೂಬಿ ಸೇರಿದಂತೆ ಯಾವುದೇ ಅನುಮತಿ ಇಲ್ಲದೇ ಕಾರ್ಯ ನಿರ್ವಹಿಸುತ್ತಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಪ್ರಾಣಿಗಳಿಗೆ ಅನಸ್ತೇಶಿಯಾ ನೀಡದೇ ಪ್ರಯೋಗ ನಡೆಸಿರುವುದು ಹಾಗೂ ಪ್ರ‍್ಯಾಕ್ಟಿಸ್‌ಗಾಗಿ ನಾಯಿಯ ಕಾಲು ಕಟ್ ಮಾಡಿರುವುದು ಗೊತ್ತಾಗಿದೆ.

ಇನ್ನೂ ಆಸ್ಪತ್ರೆಯಲ್ಲಿ ಅಕ್ರಮವಾಗಿ, ಹಿಂಸಾ ರೂಪದಲ್ಲಿ ಪ್ರಾಣಿಗಳನ್ನ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ಜೊತೆಗೆ 12 ನಾಯಿಗಳು, 1 ಬೆಕ್ಕು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಲ್ಲೂ ಒಂದು ನಾಯಿ ಸತ್ತ ಸ್ಥಿತಿಯಲ್ಲಿ ಸಿಕ್ಕಿದೆ.

ಸದ್ಯ ಜಿಬಿಎ ಅಧಿಕಾರಿಗಳು ಆಸ್ಪತ್ರೆ ಬಂದ್ ಮಾಡಿದ್ದು, ಪಶು ಇಲಾಖೆಯಿಂದ ಆಸ್ಪತ್ರೆಗೆ ನೋಟಿಸ್ ನೀಡಿದ್ದಾರೆ. ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ಮಂಜುನಾಥ್ ಮತ್ತು ಖಾಸಗಿ ಆಸ್ಪತ್ರೆ ವೈದ್ಯ ಆಸೀಫ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜೊತೆಗೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ 1960, ಬಿಎನ್‌ಎಸ್ 2023ರ ಅಡಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಆಂಧ್ರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

Spread the loveಚಿಕ್ಕಬಳ್ಳಾಪುರ: ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದ ಅಂತಿಮ ವರ್ಷದ ಇಂಜಿನಿಯರಿಂಗ್  ವಿದ್ಯಾರ್ಥಿ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ