ಕೋಲಾರ: ಪತ್ನಿ ಜೊತೆ ಅಕ್ರಮ ಸಂಬಂಧ ಹಿನ್ನೆಲೆ ಪತಿ, ಪ್ರಿಯಕರನನ್ನು ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕ ತಿರುಪತಿ ಬಳಿ ನಡೆದಿದೆ.
ಸೊಣ್ಣೇನಹಳ್ಳಿ ವೆಂಕಟೇಶ್ (36) ಕೊಲೆಯಾದ ಪ್ರಿಯಕರ. ಸುರೇಶ್ ಪತ್ನಿ ಜೊತೆಗೆ ವೆಂಕಟೇಶ್ ಅಕ್ರಮ ಸಂಬಂದ ಹೊಂದಿದ್ದ ಎಂಬ ಕಾರಣಕ್ಕೆ ಸುರೇಶ್ ಹಾಗೂ ಸ್ನೇಹಿತ ಸಂತೋಷ್ ಇಬ್ಬರೂ ಎಣ್ಣೆ ಪಾರ್ಟಿ ಮಾಡಿ ವೆಂಕಟೇಶ್ ಕೊಲೆಗೈದಿದ್ದಾರೆ.
ಬಳಿಕ ವೆಂಕಟೇಶ್ ಮೃತದೇಹವನ್ನು ಸಂಪ್‌ಗೆ ಹಾಕಿ ಮುಚ್ಚಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7