ಬೆಳಗಾವಿ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳಗಾವಿ ನಗರದ ಸಿಸಿಬಿ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ಷಯಕುಮಾರ ಸೋಮಶೇಖರ ಅಂಕಲಗಿ (20), ಆದರ್ಶ ಈರಯ್ಯ ಹಿರೇಮಠ (25), ಮಣಿಕಂಠ ರಾಚಯ್ಯಾ ಉಗರಖೋಡ ಬಂಧಿತ ಆರೋಪಿಗಳು. ಇವರು ಮೈತಾಬ ಎಂಬಾತನಿಂದ ಗಾಂಜಾ ತಂದು, ಬೆಳಗಾವಿ ನಗರದ ಸಾಗರ ಕಿನಾರಾ ದಾಬಾ, ಯಡಿಯೂರಪ್ಪ ಮಾರ್ಗ ಹತ್ತಿರ ತಮ್ಮ ಬೈಕ್ ಮೇಲೆ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ ವೇಳೆ ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ ರವರ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ಭಜಂತ್ರಿ ದಾಳಿ ಮಾಡಿದ್ದಾರೆ.
ದಾಳಿಯ ವೇಳೆ ಆರೋಪಿತರಿಂದ ರೂ.55,000 ಮೌಲ್ಯದ 1 ಕೆಜಿ 100 ಗ್ರಾಂ ಗಾಂಜಾ, ರೂ.5,000 ಮೋಬೈಲ್, ರೂ.1,20,000 ಮೌಲ್ಯದ ಬೈಕ್ ಹೀಗೆ ಒಟ್ಟು ರೂ. 1,80,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆಮ
ಎಲ್ಲ ಆರೋಪಿತರ ವಿರುದ್ಧ ಶಹಾಪೂರ ಪೊಲೀಸ್ ಠಾಣೆ ಪ್ರ. ಸಂ. 124/2026 ಕಲಂ.20(b)(ii)(B) ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
Laxmi News 24×7