Breaking News

ಚಿನ್ನ ಅಡವಿಟ್ಟುಕೊಂಡು ವಂಚನೆ, ನೂರಾರು ಜನಕ್ಕೆ ನಾಮ – ಮೈಸೂರಿನಲ್ಲಿ ಮತ್ತೊಬ್ಬ `ಗೋಲ್ಡ್ ವಂಚಕ’

Spread the love

ಮೈಸೂರು: ಚಿನ್ನದ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ ಮಾಡಿದ ಸರಣಿ ಅಪರಾಧ ಮೈಸೂರಿನಲ್ಲಿ ಮುಂದುವರಿದಿದೆ. ಚಿನ್ನತಂಬಿ, ಮೋಹನ್‌ಲಾಲ್ ಬಳಿಕ ಈಗ ಯೋಗೇಶ್ ಎಂಬುವವನ ಸರದಿ.

ಧನಲಕ್ಷ್ಮಿ ಗೋಲ್ಡ್ ಕಂಪನಿ ಮಾಲೀಕ ಯೋಗೇಶ್ ನೂರಾರು ಗ್ರಾಹಕರಿಗೆ ಪಂಗನಾಮ ಹಾಕಿದ್ದಾನೆ. ನೂರಕ್ಕೂ ಹೆಚ್ಚು ಜನರಿಂದ ಚಿನ್ನ ಅಡವಿಟ್ಟುಕೊಂಡು ಮೋಸ ಮಾಡಿರುವ ಆರೋಪ ಯೋಗೇಶ್ ಮೇಲೆ ಬಂದಿದೆ.

ಅಡವಿಟ್ಟ ಚಿನ್ನವನ್ನ ವಾಪಸ್ ಕೊಡದೇ ಸತಾಯಿಸುತ್ತಿದ್ದಾನೆ. ಕಳೆದ 1 ವರ್ಷದಿಂದಲೂ ಗ್ರಾಹಕರಿಗೆ ಯೋಗೇಶ್ ಮೋಸ ಮಾಡುತ್ತಲೇ ಬಂದಿದ್ದಾನೆ. ಮೋಸಗಾರ ಬೆನ್ನಿಗೆ ಮೈಸೂರು ಪೊಲೀಸರು ನಿಂತಿದ್ದಾರಾ? ಎಂಬ ಅನುಮಾನ ಹುಟ್ಟುಹಾಕುತ್ತಿದೆ. ಇದಕ್ಕೆ ಪೂರಕವಾಗಿ ಧನಲಕ್ಷ್ಮಿ ಗೋಲ್ಡ್ ಕಂಪನಿ ಮಾಲೀಕ ಮಾತನಾಡಿರುವ ಆಡಿಯೋ ಕೂಡಲ ಲಭ್ಯವಾಗಿದೆ. ಹಣದ ವ್ಯವಹಾರದಲ್ಲಿ ಪೊಲೀಸ್ ಅಧಿಕಾರಿಗಳ ಹೆಸರನ್ನೂ ಯೋಗೇಶ್ ಆಡಿಯೋದಲ್ಲಿ ಪ್ರಸ್ತಾಪಿಸಿರುವುದು ಕಂಡುಬಂದಿದೆ.

ಎಸಿಪಿ, ಇನ್ಸ್‌ಪೆಕ್ಟರ್‌ಗಳಿಗೆ ಹಣ ನೀಡಿರುವುದಾಗಿ ಯೋಗೇಶ್ ಆಡಿಯೋದಲ್ಲಿ ಮಾತನಾಡಿದ್ದಾನೆ. ಲಂಚದ ಹಣ ಕೊಟ್ಟು ಕೇಸ್ ಅಡ್ಜಸ್ಟ್ ಮಾಡ್ತಿದ್ದೇನೆ ಎಂದು ಯೋಗೇಶ್ ಆಡಿಯೋ ದಲ್ಲಿ ಗ್ರಾಹಕರೊಬ್ಬರಿಗೆ ಹೇಳಿದ್ದಾನೆ. ಏಳು ತಿಂಗಳಾದರೂ ಹಣ ವಾಪಸ್ ನೀಡದಿರುವ ಬಗ್ಗೆ ಗ್ರಾಹಕನ ನಡುವೆ ಮಾತುಕತೆ ವೇಳೆ ಈ ವಿಚಾರ ಯೋಗೇಶ್ ಹೇಳಿದ್ದಾನೆ.

ಧನಲಕ್ಷ್ಮಿ ಗೋಲ್ಡ್ ಕಂಪನಿ ಮಾಲೀಕನ ವಿರುದ್ಧ ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಗ್ರಾಹಕರು ದೂರು ನೀಡಿದ್ದಾರೆ. ಇಷ್ಟಾದರೂ ಮಾಲೀಕನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ.


Spread the love

About Laxminews 24x7

Check Also

ರೇಣುಕಾಸ್ವಾಮಿ ಹತ್ಯೆ ಕೇಸ್‌ – ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಪ್ರಮುಖ ಆರೋಪಿಗೆ ಜಾಮೀನು

Spread the loveಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಪ್ರಮುಖ ಆರೋಪಿ ಉಡುಪಿ ಮೂಲದ ಗೌರವ್ ಶೆಟ್ಟಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ