Breaking News

ಇಸ್ಕಾನ್‌ನಲ್ಲಿ ಸೆ.3 ರಿಂದ 5 ರವರೆಗೆ ಅದ್ಧೂರಿ ಶ್ರೀ ಕೃಷ್ಣ ಜನ್ಮಾಷ್ಟಮಿ – ವಿಶೇಷ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

Spread the love

ಬೆಂಗಳೂರು: ಇಸ್ಕಾನ್‌ನ ಎಲ್ಲಾ ದೇವಾಲಯಗಳಲ್ಲಿ ಸೆಪ್ಟೆಂಬರ್ 3 ರಿಂದ 5 ರವರೆಗೆ ಮೂರು ದಿನಗಳ ಕಾಲ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ.

ಹಬ್ಬದ ದಿನಗಳಲ್ಲಿ ವಿಶೇಷ ಮಹಾ ಅಭಿಷೇಕ, ಮಹಾಮಂಗಳಾರತಿ, 56 ಬಗೆಯ ಖಾದ್ಯಗಳ ಚಪ್ಪನ್ ಭೋಗ್’ ಪ್ರಿಯವಾದ ಮಖನ್ ಮಿಶ್ರಿ (ಬೆಣ್ಣೆ-ಸಕ್ಕರೆ) ನೈವೇದ್ಯ, ಪುಷ್ಪಾಂಜಲಿ ಸೇವೆ, ಭವ್ಯ ಪಲ್ಲಕ್ಕಿ ಉತ್ಸವ ಹಾಗೂ ಜುಲನ್ ಸೇವೆ (ಜೋಕಾಲಿ ಸೇವೆ)ಗಳು ನೆರವೇರಲಿವೆ.

ಗೋ ಪೂಜೆ, ಕೋಟಿ ಜಪ ಯಜ್ಞ, ಭಗವದ್ಗೀತಾ ಪಾರಾಯಣ, ಖ್ಯಾತ ಕಲಾವಿದರಿಂದ ನೃತ್ಯ-ಸಂಗೀತ ಕಾರ್ಯಕ್ರಮಗಳು ಹಾಗೂ ಮಕ್ಕಳಿಂದ ಶ್ಲೋಕ ಪಠಣಗಳು ಜರುಗಲಿವೆ. ಪೋಷಕರು ತಮ್ಮ ಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣರ ವೇಷ ಧರಿಸಿ ಪಾಲ್ಗೊಳ್ಳಲು ಆನ್‌ಲೈನ್ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ.

ಇಸ್ಕಾನ್ ಸಂಸ್ಥಾಪಕ-ಆಚಾರ್ಯ ಶ್ರೀಲ ಪ್ರಭುಪಾದರ ಜೀವನ ಮತ್ತು ಸಾಧನೆಗಳನ್ನು ಬಿಂಬಿಸುವ ವಿಶೇಷ ಪ್ರದರ್ಶನ ಇರಲಿದೆ. ಉತ್ಸವಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ನಿರಂತರವಾಗಿ ಅನ್ನಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿದೆ.

ಸ್ವಾಗತಂ ಕೃಷ್ಣ ನೇರಪ್ರಸಾರ:
ಮನೆಯಲ್ಲೇ ಕುಳಿತು ಸಂಭ್ರಮಿಸುವ ಭಕ್ತರಿಗಾಗಿ ಸೆಪ್ಟೆಂಬರ್ 4ರಂದು ರಾತ್ರಿ 8:00 ಗಂಟೆಗೆ ʻಸ್ವಾಗತಂ ಕೃಷ್ಣʼ ಎಂಬ ಡಿಜಿಟಲ್ ಕಾರ್ಯಕ್ರಮ ನೇರಪ್ರಸಾರವಾಗಲಿದೆ. ಇದರಲ್ಲಿ ಭಕ್ತಿ ಸಂಗೀತ, ಪ್ರವಚನ, ವಿಶೇಷ ಅಭಿಷೇಕ ಮತ್ತು ಲೈವ್ ಕ್ವಿಜ್ ಸ್ಪರ್ಧೆಗಳಿರಲಿದ್ದು, ವೀಕ್ಷಕರು ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ.

ಕೆಟಿಪಿಒದಲ್ಲಿ 5253 ಖಾದ್ಯಗಳ ನೈವೇದ್ಯ, ಸಂಗೀತ ರಸದೌತಣ:
ವೈಟ್‌ಫೀಲ್ಡ್‌ನ ಕೆಟಿಪಿಒ (KTPO) ಆವರಣದಲ್ಲಿ ನಡೆಯುವ ಜನ್ಮಾಷ್ಟಮಿ ಸಂಭ್ರಮದಲ್ಲಿ “ನಿಮ್ಮ ಅಡುಗೆಮನೆಯಿಂದ ಕೃಷ್ಣನಿಗೆ ಪ್ರೀತಿಯಿಂದ” ಅಭಿಯಾನದಡಿ ಭಕ್ತರಿಂದ ಸಂಗ್ರಹಿಸಿದ ಬರೋಬ್ಬರಿ 5253 ವೈವಿಧ್ಯಮಯ ಆಹಾರ ಪದಾರ್ಥಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ.

ಯುವ ಸಮುದಾಯವನ್ನು ಆಕರ್ಷಿಸಲು ಯುವ ಬ್ಯಾಂಡ್‌ಗಳಿಂದ ಕೃಷ್ಣ ಜಾಮ್‌ಫೆಸ್ಟ್ – ಭಜನ್ ಜಾಮಿಂಗ್ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಪ್ರಶಸ್ತಿ ಪುರಸ್ಕೃತ ಕಲಾವಿದ ಅಬ್ಬಿ ವಿ (Abby V) ಅವರ ವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ದರ್ಶನ ಸಮಯ
ಇಸ್ಕಾನ್ ಹರೇ ಕೃಷ್ಣ ಹಿಲ್(ಕಾರ್ಡ್‌ ರಸ್ತೆ, ರಾಜಾಜಿನಗರ)
ಸೆ.3: ಬೆಳಿಗ್ಗೆ 8 – ರಾತ್ರಿ 10,
ಸೆ.4: ಬೆಳಿಗ್ಗೆ 8 – ರಾತ್ರಿ 12

ಇಸ್ಕಾನ್ ವೈಕುಂಠ ಹಿಲ್(ಕನಕಪುರ ರಸ್ತೆ, ವಸಂತಪುರ)
ಸೆ.3: ಬೆಳಿಗ್ಗೆ 8 – ರಾತ್ರಿ 10
ಸೆ.4: ಬೆಳಿಗ್ಗೆ 8 – ರಾತ್ರಿ 12 (ಮಧ್ಯರಾತ್ರಿ)

ಇಸ್ಕಾನ್ ಹರೇ ಕೃಷ್ಣ ಫೀಲ್ಡ್ಸ್(ಕೆಟಿಪಿಒ, ವೈಟ್‌ಫೀಲ್ಡ್)
ಸೆ.4: ಬೆಳಿಗ್ಗೆ 8 – ರಾತ್ರಿ 12 (ಮಧ್ಯರಾತ್ರಿ)
ಸೆ.5: ಬೆಳಿಗ್ಗೆ 8 – ರಾತ್ರಿ 8

ಐವಿ ರೊಸ್ಸಾ ರೆಸಾರ್ಟ್ ಗ್ರೌಂಡ್, ಸರ್ಜಾಪುರ ರಸ್ತೆ
ಸೆ.4 ಬೆಳಿಗ್ಗೆ 7 – ರಾತ್ರಿ 12 (ಮಧ್ಯರಾತ್ರಿ)


Spread the love

About Laxminews 24x7

Check Also

ಮೈಸೂರಿನಲ್ಲಿ ಮತ್ತೊಂದು ʻಗೋಲ್ಡ್ ಸ್ಕ್ಯಾಮ್ʼ – 80ಕ್ಕೂ ಹೆಚ್ಚು ಜನರಿಗೆ ಉಂಡೆನಾಮ!

Spread the loveಮೈಸೂರು: ನಗರದಲ್ಲಿ ಚಿನ್ನತಂಬಿ ಚಿನ್ನ ವಂಚನೆ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಗೋಲ್ಡ್ ಸ್ಕ್ಯಾಮ್ ನಡೆದಿದೆ. ಚಿನ್ನದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ