Breaking News

ಜಿಲ್ಲಾದ್ಯಂತ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Spread the love

ಬೆಳಗಾವಿ: ಜಿಲ್ಲಾ ಪಂಚಾಯತ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ.3 ರಂದು ಜಿಲ್ಲೆಯ ಎಲ್ಲ ತಾಲೂಕುಗಳ ಒಟ್ಟು 22 ಸ್ಥಳಗಳಲ್ಲಿ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ”ವನ್ನು ಆಯೋಜಿಸಲಾಗಿದೆ. ಹೀಗಾಗಿ, ಸರ್ಕಾರಿ ನೌಕರರು ಸಿಬ್ಬಂದಿ, ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಕ್ತದಾನ ಶಿಬಿರಕ್ಕಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಎಲ್ಲ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಕ್ತದಾನ ನಡೆಯಲಿದೆ. ರಕ್ತದಾನಕ್ಕೆ ಬರುವ ಎಲ್ಲರಿಗೂ ಮೂಲಸೌಕರ್ಯಗಳಾದ ಕುಡಿಯುವ ನೀರು, ಊಟ, ವೈದ್ಯಕೀಯ ತಪಾಸಣೆ, ಆರೋಗ್ಯದ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ದಾನಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ಜೀವನ ರೂಪಿಸಿಕೊಳ್ಳಲು ನೆರವಾಗುವ ಶಿಕ್ಷಕರಿಗೆ ಗೌರವ ನಮನ ಸಲ್ಲಿಸುವ ಉದ್ದೇಶದಿಂದ ಜಿಲ್ಲಾದ್ಯಂತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ಒಂದು ಸಮಾಜಮುಖಿ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ರಕ್ತದಾನ ಶಿಬಿರ ನಡೆಯಲಿರುವ ಕೇಂದ್ರಗಳು:

1. ಬೆಳಗಾವಿ: ಬಿಮ್ಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಕೆ.ಎಲ್.ಇ. ಆಸ್ಪತ್ರೆ, ಎಸ್.ಬಿ.ಜಿ. ಆಯುರ್ವೇದಿಕ ಮೆಡಿಕಲ್ ಕಾಲೇಜ್ ಗಣೇಶಪುರ, ಸರ್ಕಾರಿ ಕನ್ನಡ ಶಾಲೆ (ನಂ.26) ವಿಶ್ವೇಶ್ವರಯ್ಯ ನಗರ ಬೆಳಗಾವಿ.

2. ಅಥಣಿ: ಆರ್.ಎಚ್. ಕುಲಕರ್ಣಿ ಸಭಾಭವನ ಅಥಣಿ

3. ಕಾಗವಾಡ: ಕೆ.ಆರ್.ಇ.ಎಸ್. ಸಭಾಭವನ ಐನಾಪುರ

4. ಬೈಲಹೊಂಗಲ: ತಾಲೂಕಾ ಆಸ್ಪತ್ರೆ ಬೈಲಹೊಂಗಲ

5. ಕಿತ್ತೂರ: ರಾಣಿ ಚನ್ನಮ್ಮ ಸಭಾಭವನ ಕಿತ್ತೂರ.

6. ಖಾನಾಪೂರ: ಮಂಗಲ ಕಾರ್ಯಾಲಯ ಪಟ್ಟಣ ಪಂಚಾಯತ ಖಾನಾಪೂರ, ಸಮುದಾಯ ಆರೋಗ್ಯ ಕೇಂದ್ರ ನಂದಗಡ

7. ಯರಗಟ್ಟಿ: ಸರ್ಕಾರಿ ಆಸ್ಪತ್ರೆ ಯರಗಟ್ಟಿ

8. ಸವದತ್ತಿ: ಎಂ.ಎಲ್.ಎ. ಮಾಡಲ್ ಹಿರಿಯ ಪ್ರಾಥಮಿಕ ಶಾಲೆ ಗುರ್ಲಹೊಸೂರ

9. ರಾಮದುರ್ಗ: ಗುರುಭವನ ವಿದ್ಯಾಚೇತನ ಶಾಲೆ, ರಾಮದುರ್ಗ, ಬೆಂಬಳಗಿ ಪದವಿ ಕಾಲೇಜ್ ರಾಮದುರ್ಗ

10. ಚಿಕ್ಕೋಡಿ: ಡಯಟ್ ಕಾಲೇಜ್ ಸಭಾಭವನ ಚಿಕ್ಕೋಡಿ

11. ನಿಪ್ಪಾಣಿ: ಸರ್ಕಾರಿ ಆಸ್ಪತ್ರೆ ನಿಪ್ಪಾಣಿ

12. ಗೋಕಾಕ: ತಾಲೂಕಾ ಆಸ್ಪತ್ರೆ ಗೋಕಾಕ,

13. ಮೂಡಲಗಿ: ಕೆ.ಎಸ್. ಸೋನವಾಲಕರ್ ಸರ್ಕಾರಿ ಪ್ರೌಢಶಾಲೆ ಮೂಡಲಗಿ

14. ಹುಕ್ಕೇರಿ: ತಾಲೂಕ ಪಂಚಾಯತ ಸಭಾಭವನ ಹುಕ್ಕೇರಿ, ಸರ್ಕಾರಿ ಆಸ್ಪತ್ರೆ ಸಂಕೇಶ್ವರ, ಸರ್ಕಾರಿ ಆಸ್ಪತ್ರೆ ಯಮಕನಮರಡಿ.

15. ರಾಯಬಾಗ: ಸರ್ಕಾರಿ ಆಸ್ಪತ್ರೆ ರಾಯಬಾಗ, ಸರ್ಕಾರಿ ಆಸ್ಪತ್ರೆ ಹಾರೂಗೇರಿ


Spread the love

About Laxminews 24x7

Check Also

ಮೈಸೂರಿನಲ್ಲಿ ಮತ್ತೊಂದು ʻಗೋಲ್ಡ್ ಸ್ಕ್ಯಾಮ್ʼ – 80ಕ್ಕೂ ಹೆಚ್ಚು ಜನರಿಗೆ ಉಂಡೆನಾಮ!

Spread the loveಮೈಸೂರು: ನಗರದಲ್ಲಿ ಚಿನ್ನತಂಬಿ ಚಿನ್ನ ವಂಚನೆ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಗೋಲ್ಡ್ ಸ್ಕ್ಯಾಮ್ ನಡೆದಿದೆ. ಚಿನ್ನದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ