Breaking News

ಗುಂಡಿ ತಪ್ಪಿಸಲು ಹರಸಾಹಸ ಪಡುತ್ತಿದ್ದ ಬೈಕ್‌ಗೆ ಟ್ಯಾಂಕರ್‌ ಡಿಕ್ಕಿ – ಸವಾರ ಬಚಾವ್‌

Spread the love

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಅವಾಂತರ ಮುಗಿಯದ ಕಥೆ ರೀತಿ ಆಗಿದೆ. ವರ್ತೂರಿನ ಗುಂಜೂರಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಬೈಕ್‌  ಸವಾರ ಪರದಾಡುತ್ತಿದ್ದಾಗ ಆತನ ಬೈಕ್‌ಗೆ ಹಿಂಬದಿಯಿಂದ ಟ್ಯಾಂಕರ್‌  ಡಿಕ್ಕಿಯಾಗಿದೆ.

ಟ್ಯಾಂಕರ್‌ ಡಿಕ್ಕಿಯಾಗುತ್ತಿದ್ದಂತೆ ಸವಾರ ಬೈಕ್‌ ಬಿಟ್ಟು ಜಿಗಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಸ್ತೆ ಗುಂಡಿ ಇದ್ರೂ ವೇಗದಲ್ಲಿ ಬಂದು ನಿಯಂತ್ರಣ ತಪ್ಪಿ ಬೈಕ್‌ಗೆ ಗುದ್ದಿದ ನಂಬರ್ ಪ್ಲೇಟ್ ಇಲ್ಲದ ಟ್ಯಾಂಕರ್‌ನ್ನು ಇತರ ವಾಹನ ಸವಾರರು ಬೆನ್ನಟ್ಟಿ ಹಿಡಿದಿದ್ದಾರೆ. ಈ ವೇಳೆ ಡಿಎಲ್ ಕೂಡ ಇಲ್ಲದೇ ವಾಹನ ಓಡಿಸ್ತಾ ಇರೋದು ಗೊತ್ತಾಗಿದೆ.

ರಸ್ತೆ ಗುಂಡಿಯಿಂದ ಅನೇಕರು ಸಾವನ್ನಪ್ಪಿದ್ದಾರೆ. ಆದರೂ ಜಿಬಿಎ (GBA) ಯಾವುದೇ ಕ್ರಮಕೈಗೊಂಡಿಲ್ಲ. ರಸ್ತೆ ಗುಂಡಿ ಮುಚ್ಚಲು ಬಿಡುಗಡೆಯಾಗುವ ಕೋಟಿ ಕೋಟಿ ಹಣ ಎಲ್ಲಿ ಹೋಯಿತು ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.


Spread the love

About Laxminews 24x7

Check Also

ಸಿಖ್ ವಿರೋಧಿ ದಂಗೆ ಕೇಸ್‌ ಅಪರಾಧಿ, ಜೈಲಿನಲ್ಲಿದ್ದ ಮಾಜಿ ಕಾಂಗ್ರೆಸ್‌ ಸಂಸದ ಸಜ್ಜನ್ ಕುಮಾರ್ ನಿಧನ

Spread the loveನವದೆಹಲಿ: ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ  ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಕಾಂಗ್ರೆಸ್  ಸಂಸದ ಸಜ್ಜನ್ ಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ