ಬೆಳಗಾವಿಯ ಪುಣೆ–ಬೆಂಗಳೂರು (ಪಿ.ಬಿ.) ರಸ್ತೆಯ ತಾನಾಜಿ ಗಲ್ಲಿ ಓವರ್ಬ್ರಿಡ್ಜ್ ಬಳಿ ಸೋಮವಾರ ಮಧ್ಯಾಹ್ನ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತರನ್ನು ರೋಹಿತ್ ರಮೇಶ್ ಪಾಟೀಲ್ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸೋಶಿಯಲ್ ವರ್ಕರ್ ರೆಸ್ಕ್ಯೂ ತಂಡದ ಅವಧೂತ್ ತುದವೇಕರ್, ಪದ್ಮಪ್ರಸಾದ್ ಹೂಳಿ, ಶಶಿಕಾಂತ್ ಅಂಬೇವಾಡ್ಕರ್, ವಿಕ್ಕಿ ಮೆಹತಾ, ಮೈಕಲ್ ಪಿಂಟೋ ಹಾಗೂ ಶುಭಂ ಹೂಳಿ ಸ್ಥಳಕ್ಕೆ ಧಾವಿಸಿ ಅಗತ್ಯ ನೆರವು ನೀಡಿದರು.
ರೈಲ್ವೆ ಪೊಲೀಸರು ಹಾಗೂ ಸೋಶಿಯಲ್ ವರ್ಕರ್ ತಂಡ ಸ್ಥಳ ಪರಿಶೀಲನೆ ಹಾಗೂ ಪಂಚನಾಮೆ ನಡೆಸಿ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಮುಂದಿನ ಕಾನೂನು ಕ್ರಮಕ್ಕಾಗಿ ರವಾನಿಸಿದರು.
ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Laxmi News 24×7