Breaking News

ಧಾರವಾಡಗೆ ಬರುತ್ತಿದಂತೆ ಲಾಡ್‌ ಅವರಿಗೆ ರೈತರ ಪ್ರತಿಭಟನೆ ಬಿಸಿ

Spread the love

ಧಾರವಾಡಗೆ ಬರುತ್ತಿದಂತೆ ಲಾಡ್‌ ಅವರಿಗೆ ರೈತರ ಪ್ರತಿಭಟನೆ ಬಿಸಿ…. ಬರ ಜಿಲ್ಲೆಯೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ರೈತರಿಂದ ನೂತನ ಸಚಿವ ಸಂತೋಷ ಲಾಡ್‌ಗೆ ಮನವಿ.
ಸಿಎಂ ಡಿಕೆಶಿಯವರ ಕ್ಯಾಬಿನೆಟ‌ನಲ್ಲಿ ಮಂತ್ರಿ ಸ್ಥಾನ ಪಡೆದುಕೊಂಡ ಬಳಿಕ ಮೊದಲ‌ ಬಾರಿಗೆ ಧಾರವಾಡ‌ಗೆ ಸಚಿವ ಸಂತೋಷ ಲಾಡ್ ಅವರು ಭೇಟಿ ನೀಡುತ್ತಿದಂತೆ, ಲಾಡ್ ಅವರಿಗೆ ರೈತರ ಪ್ರತಿಭಟನೆ ಬಿಸಿ ತಟ್ಟಿದೆ.
ಹೌದು… ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಇಂದು ಧಾರವಾಡಗೆ ಮೊದಲ ಬಾರಿ ಆಗಮಿಸಿದ ಸಂತೋಷ ಲಾಡ್ ಅವರು, ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ಜಿಲ್ಲೆಯಲ್ಲಿನ ಮಳೆ ಬೆಳೆಯ ಹಾನಿ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಂದಿದ್ದರು. ಈ ವೇಳೆ ಲಾಡ್ ಅವರು ಡಿಸಿ ಕಚೇರಿ ಪ್ರವೇಶ ಮಾಡುತ್ತುದಂತೆ ರೈತರು ಪ್ರತಿಭಟನೆ ಮಾಡಿ ಲಾಡ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ‌ಜಿಲ್ಲೆಯಲ್ಲಿ ಬರಗಾಲ ಬಂದಿದೆ. ಮಳೆಯ ಕೊರತೆಯಿಂದ ರೈತರ ಬೀದಿಗೆ ಬರು ಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ಧಾರವಾಡ ಜಿಲ್ಲೆಯನ್ನು ಬರ ಜಿಲ್ಲೆಯೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ‌ರೈತರ ಸಲಾ ಮನ್ನಾ ಮಾಡಿ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಲು ಎಂದು ಇದೇವೇಳೆ ರೈತರು ಸಚಿವರಿಗೆ ಒತ್ತಾಯ ಮಾಡಿದರು

Spread the love

About Laxminews 24x7

Check Also

ಲೇಡಿ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ – ಕ್ಷಮೆಯಾಚಿಸಿದ ಶಾಸಕ ಸುರೇಶ್‌ಗೌಡ ಪುತ್ರಿ

Spread the loveಮಂಡ್ಯ: ಲೇಡಿ ಪಿಎಸ್‌ಐಗೆ  ಕಪಾಳಮೋಕ್ಷ ಪ್ರಕರಣ ಸಂಬಂಧ ಶಾಸಕ ಸುರೇಶ್‌ಗೌಡ  ಪುತ್ರಿ ಐಶ್ವರ್ಯ ಪಿಎಸ್‌ಐ ಸವಿತಾ ಪಾಟೀಲ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ