Breaking News

ಕರ್ತವ್ಯ ನಿರತ ಯೋಧ ಹೃದಯಾಘಾತದಿಂದ ಸಾವು

Spread the love

ಧಾರವಾಡ: ಕರ್ತವ್ಯ ನಿರತ ಯೋಧ  ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ  ನಡೆದಿದೆ.

ಧಾರವಾಡ ತಾಲೂಕಿನ ಗರಗ ಗ್ರಾಮದ ಯೋಧ ವಸಂತರೆಡ್ಡಿ ಕೆಂಚರೆಡ್ಡಿನವರ್ (45) ಮೃತ ಯೋಧ. 18ನೇ ಇನ್ಫಂಟ್ರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವಸಂತರೆಡ್ಡಿ ಅವರು ಸದ್ಯ ರಾಜಸ್ಥಾನದ ಬಾಡಮೆರ್‌ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ 24 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಸಂತರೆಡ್ಡಿ ಅವರಿಗೆ ಬುಧವಾರ ಏಕಾಏಕಿ ಹೃದಯಾಘಾತವಾಗಿದೆ.

ವೀರ ಯೋಧನ ಪಾರ್ಥಿವ ಶರೀರವು ಗುರುವಾರ ಸಂಜೆ 6 ಗಂಟೆಗೆ ಗರಗ ಗ್ರಾಮಕ್ಕೆ ಬರಲಿದೆ. ವಿಮಾನದ ಮೂಲಕ ಗೋವಾಗೆ ಪಾರ್ಥಿವ ಶರೀರವನ್ನು ತಂದು ಅಲ್ಲಿಂದ ರಸ್ತೆ ಮೂಲಕ ಸ್ವಗ್ರಾಮಕ್ಕೆ ತರಲಾಗುತ್ತದೆ. ಶುಕ್ರವಾರ ಯೋಧನ ಅಂತ್ಯಕ್ರಿಯೆ ಭಾರತೀಯ ಸೇನೆಯ ರೀತಿ ನಿಯಮಗಳಂತೆ ನಡೆಯಲಿದೆ.


Spread the love

About Laxminews 24x7

Check Also

ಅತ್ತೆ-ಮಾವನ ಮನಸ್ಥಿತಿ ಎಂದಿಗೂ ಬದಲಾಗಲ್ಲʼ; ವಿಡಿಯೋ ರೆಕಾರ್ಡ್‌ ಮಾಡಿ ನೇಣಿಗೆ ಶರಣಾದ ಶಿಕ್ಷಕಿ

Spread the loveನವದೆಹಲಿ: ಮದುವೆಯಾದ 8 ತಿಂಗಳ ಬಳಿಕ ಸರ್ಕಾರಿ ಶಿಕ್ಷಕಿಯೊಬ್ಬರು ವಿಡಿಯೋ ರೆಕಾರ್ಡ್‌ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ