Breaking News

ರಾಧಾಕೃಷ್ಣ ಯೋಜನೆಗೆ ಹೆಚ್ಚಿದ ವಿರೋಧ

Spread the love

ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಹಿನ್ನೀರನ್ನು ಇಚಲಕರಂಜಿಗೆ ಸಾಗಿಸಲು ಮಹಾರಾಷ್ಟç ಸರ್ಕಾರ ಯೋಜನೆ ರೂಪಿಸಿದೆ. ಕಲ್ಲೋಳ ಬ್ಯಾರೇಜ್ ಹಿನ್ನೀರಿನ ಕರ್ನಾಟಕದ ಗಡಿ ಗ್ರಾಮಗಳಿಗೆ ಆಯ್ತು, ಮಹಾರಾಷ್ಟçದ ಕೊಲ್ಲಾಪುರ ಜಿ±್ಲೆ ಶಿರೋಳ ತಾಲೂಕಿನ ದಾನವಾಡ, ದತ್ತವಾಡ, ಸೈನಿಕ ಟಾಕಳಿ, ಟಾಕಳಿವಾಡಿ, ಅಕ್ಕಿವಾಟ, ಖಿದರಾಪುರ, ಘೋಸರವಾಡ, ರಾಜಾಪುರ, ಮಧುರೇವಾಡಿ, ಹೆರವಾಡ ​​ಮತ್ತು ತೆರವಾಡ ​​ಸೇರಿದಂತೆ ಹತ್ತಾರು ಗ್ರಾಮಗಳಿಗೆ ಜಲ ಮೂಲವಾಗಿದೆ. ಜಾರಿಯಾದರೆ ಈ ಎಲ್ಲ ಗ್ರಾಮಗಳಲ್ಲಿ ನೀರಿನ ಕೊರತೆಯಾಗಲಿದೆ ಎಂಬ ಆಕ್ರೋಶ ಗಡಿ ಮರಾಠಿಗರಿಂದ ಯೋಜನೆಯಾಗಿದೆ. ಈ ಯೋಜನೆ ವಿರೋಧಿಸಿ ಆಗಸ್ಟ್ ತಿಂಗಳಿನಲ್ಲಿ ಪ್ರತಿಭಟನೆ ನಡೆಸಲು ಮಹಾರಾಷ್ಟದ ರೈತರು ನಿರ್ಧರಿಸಿದ್ದಾರೆ. ಈ ಕುರಿತು ದಾನವಾಡ ಗ್ರಾಮ ಪಂಚಾಯಿತಿಯಲ್ಲಿ ಠರಾವು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಚಲಕರಂಜಿ ಶಾಸಕ ರಾಹುಲ್ ಅವಾಡೆ ರೈತರ ಪ್ರತಿಭಟನೆ ತಡೆಯಲು ವಿಶೇಷ ಪ್ರಯತ್ನ. ಗ್ರಾಮಗಳ ಮುಖಂಡರ ಜತೆ ಸಭೆ ನಡೆಸಿ, ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ವಿರೋಧ ತಣ್ಣಗಾಗಿಸಲು ಗ್ರಾಮಗಳಿಗೆ ವಿಶೇಷ ಅನುದಾನದ ಆಮಿಷವೊಡ್ಡುತ್ತಿದೆಂಬ ಮಾತುಗಳೂ ಕೇಳಿಬಂದಿವೆ. ಅವರು ದಾನವಾಡ ಗ್ರಾಮದ ಬಳಿ ಕೃಷ್ಣಾ ನದಿ ಸಂಗಮ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಯೋಜನೆ ಸಾಧ್ಯತೆಗಳನ್ನು ಪರಿಶೀಲಿಸಿದ್ದಾರೆ.
ಕರ್ನಾಟಕದ ಗಡಿಭಾಗದ ಗ್ರಾಮಸ್ಥರು ರಾಧಾಕೃಷ್ಣ ನೀರಾವರಿ ಯೋಜನೆ ವಿರೋಧಿಸುತ್ತಿರುವ ಗಡಿ ಮರಾಠಿಗರಿಗೆ ಬೆಂಬಲ ಸೂಚಿಸಿದ್ದು, ಕರ್ನಾಟಕ ಸರ್ಕಾರ ಯೋಜನೆ ತಡೆಗೆ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ