Breaking News

ಎಸ್‌ಐಆರ್ ಕೇಂದ್ರಗಳಿಗೆ ಆಯುಕ್ತರ ಭೇಟಿ

Spread the love

ಬೆಳಗಾವಿ :ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪ್ರಾರಂಭವಾಗಿದ್ದು ಬೂತ ಮಟ್ಟದ  ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ವಿತರಣೆ ಮಾಡಿರುವ ಗಣತಿ ನಮೂನೆ (ಇಎಫ್)ಮತದಾರರು ನಿಗದಿತ ಸಮಯದಲ್ಲಿಯೇ ವಾಪಸ್ ನೀಡಬೇಕು ಎಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ತಿಳಿಸಿದ್ದಾರೆ.
ನಗರದಲ್ಲಿರುವ ಬೆಳಗಾವಿ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿರುವ ಎಸ್‌ಐಆರ್ ಕೇಂದ್ರಗಳಿರುವ ಮತಗಟ್ಟೆಗಳು ಹಾಗೂ ಯುಸಿಎಫ್ ಯೋಜನೆ ಅಳವಡಿಸಲಿರುವ ಸ್ಥಳಗಳಿಗೆ ಭೇಟಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಬಿಎಲ್‌ಇಗಳು ಮತದಾರರ ಮನೆಗೆ ತೆರಳಿ ಇಎಫ್ ಅರ್ಜಿಗಳನ್ನು ನೀಡಿದ್ದಾರೆ. ಆದರೆ, ಬಹುತೇಕ ಮತದಾರರು ಅರ್ಜಿಗಳನ್ನು ಭರ್ತಿ ಮಾಡಿ ವಾಪಸ್ ನೀಡಿಲ್ಲ. ಇದರಿಂದಾಗಿ ಮುಂದಿನ ಪ್ರಕ್ರಿಯೇ ವಿಳಂಬವಾಗುವ ಸಾಧ್ಯತೆಯಿದೆ ಎಂದರು.
ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಐಆರ್ ಕಾರ್ಯ ಭರದಿಂದ ಸಾಗಿದ್ದು, ವೀರಸೌಧ, ಎಳ್ಳೂರ, ವಡಗಾಂವ ಸೇರಿದಂತೆ ವಿವಿಧೆಡೆ ಎಸ್‌ಐಆರ್ ಕೇಂದ್ರಗಳಲ್ಲಿ ಕಾರ್ಯ ಎಸ್‌ಐಆರ್ ಕಾರ್ಯ ವೇಗ ಪಡೆದುಕೊಳ್ಳಬೇಕು. ಬಿಎಲ್‌ಒ ಸೇರಿ ವಿವಿದಕ್ಕೆ ನಿಯೋಜನೆಗೊಂಡಿರುವ ಎಸ್‌ಐಆರ್ ಸಿಬ್ಬಂದಿ ಯಾವುದೇ ಕೆಲಸ ನಿರ್ಲಕ್ಷೃ ಮಾಡಬೇಡಿ. ಮತದಾರರ ಅನುಕೂಲಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷೃ ಮಾಡಬೇಡಿ ಎಂದು ತಿಳಿಸಿದರು.

Spread the love

About Laxminews 24x7

Check Also

ಕೆಪಿಎಸ್‍ಸಿ ಹಗರಣದ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

Spread the loveಬೆಂಗಳೂರು: ಕೆಪಿಎಸ್‍ಸಿಯ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ 80 ಲಕ್ಷ ರೂ.ವರೆಗೆ ಲಂಚ ಪಡೆದಿರುವ ಗಂಭೀರ ಆರೋಪಗಳಿದ್ದು, ಸಿಬಿಐ (CBI) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ