Breaking News

ಎಸಿಪಿ ರಾಜೇಶ್‌ಗೆ ಡಿಜಿ ಪದಕ ಪ್ರದಾನ

Spread the love

ಬೆಂಗಳೂರು: ಕರ್ನಾಟಕದ ಪೊಲೀಸ್ ಅಧಿಕಾರಿ ಎಸಿಪಿ ಎಲ್.ವೈ ರಾಜೇಶ್  ಅವರಿಗೆ ಡಿಜಿ ಪದಕವನ್ನು ಪ್ರದಾನ ಮಾಡಲಾಯಿತು. ಸದ್ಯ ರಾಜೇಶ್ ಅವರು ಸಿಸಿಬಿಯಲ್ಲಿ ಎಸಿಪಿ ಆಗಿ ಕೆಲಸ ಮಾಡುತ್ತಿದ್ದು, ಡ್ರಗ್ಸ್ ಮುಕ್ತ ಬೆಂಗಳೂರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ಹೆಮ್ಮೆ ಅವರದ್ದು.

ಕನ್ನಡದ ಯುವ ನಟ ಭೀಮ ಚಿತ್ರ ಖ್ಯಾತಿಯ ಜಯಸೂರ್ಯ ಅವರ ತಂದೆಯೂ ಆಗಿರುವ ರಾಜೇಶ್ ಅವರು, ಪೊಲೀಸ್ ಸೇವೆಯ ಜೊತೆ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷವೂ ಫೇಲ್ ಆಗಿರುವ ಎಸ್.ಎಸ್.ಎಲ್.ಸಿ ಮಕ್ಕಳಿಗಾಗಿ ವಿಶೇಷ ಶಿಬಿರವನ್ನು ಆಯೋಜನೆ ಮಾಡಿ, ಅವರ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದ್ದಾರೆ. 

ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡಿರುವ ರಾಜೇಶ್, ಲೋಕಾಯುಕ್ತದಲ್ಲೂ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ತಮ್ಮ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಇವರಿಗೆ, ಈಗಾಗಲೇ ಅನೇಕ ಪದಕಗಳು ಕೂಡಾ ಸಂದಿವೆ. ರಾಜೇಶ್ ಅವರ ಸೇವೆಗೆ ಅನೇಕ ಸಂಘ ಸಂಸ್ಥೆಗಳು ಕೂಡ ಗೌರವಿಸಿವೆ.


Spread the love

About Laxminews 24x7

Check Also

ಸೋಪ್ ಆರ್ಡರ್ ಮಾಡಲು ಹೋಗಿ 2.97 ಲಕ್ಷ ಕಳೆದುಕೊಂಡ ವ್ಯಕ್ತಿ

Spread the loveಶಿವಮೊಗ್ಗ: ಸೋಪನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 2.97 ಲಕ್ಷ ರೂ. ಕಳೆದುಕೊಂಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ