Breaking News

ಓದುವುದರ ಮುಖಾಂತರ ವ್ಯಕ್ತಿತ್ವವನ್ನು ಎತ್ತರಕ್ಕೆ ಬೆಳೆಸಲು ಸಾಧ್ಯ

Spread the love

ಬೆಳಗಾವಿ: ಕಾಲೇಜು ಶಿಕ್ಷಣ ಕಲಿಯುವ ಇಂದಿನ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಬದಿಗೊತ್ತಿ ಓದುವುದರ ಕಡೆಗೆ ಒಲವು ತೋರಿಸಬೇಕು, ಅಂದಾಗ ಮಾತ್ರ ಶಿಕ್ಷಣವು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಎತ್ತರಕ್ಕೆ ಬೆಳೆಸಲು ಸಾಧ್ಯ ಎಂದು ಬೈಲಹೊಂಗಲ ನಗರಸಭೆ ಪೌರಾಯುಕ್ತರಾದ ಭಾಗ್ಯಶ್ರೀ ಹುಗ್ಗಿ ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಹಾಗೂ ಸರ್ಕಾರಿ ಪದವಿ ಪೂರ್ವ ವಿದ್ಯಾಲಯ ಬೈಲಹೊಂಗಲ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 23 2026(ಗುರುವಾರ) ಜರುಗಿದ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಬಿ.ಆರ್ ಅಂಬೇಡ್ಕರರು ತಮ್ಮ ಬದುಕಿನ ದಿನಗಳನ್ನು ಬಹಳ ಕಷ್ಟಕರವಾಗಿ ಎದುರಿಸುತ್ತ ಅಷ್ಟೇ ಶ್ರಮ ಪಟ್ಟು ಓದುವುದರ ಮುಖಾಂತರ ಭವ್ಯ ಭಾರತಕ್ಕೆ ಸಂವಿಧಾನ ಬರೆದವರು ಎಂದು ಹೇಳಿದರು.

ಉಪನ್ಯಾಸಕರಾದ ಬಸವರಾಜ ಪುರಾಣಿಕಮಠ ಅವರು ಡಾ. ಬಿ. ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರ್ಥಪೂರ್ಣವಾಗಿ ಉಪನ್ಯಾಸ ನೀಡಿದರು.

ಹಿರಿಯ ಉಪನ್ಯಾಸಕರಾದ ಎಸ್.ಆರ್. ಕಲಹಾಳ ಅವರು ಮಾತನಾಡಿ, ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಪ್ರೇರಣಾದಾಯಕವಾಗಿದೆ. ಅನೇಕ ಕಷ್ಟಗಳನ್ನು ಎದುರಿಸಿ ದೇಶದ ಮೊದಲ ಕಾನೂನು ಸಚಿವರಾಗಿ ಸಾಮಾಜಿಕ ನ್ಯಾಯದ ಹರಿಕಾರರಾಗಿ ದೇಶಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅನನ್ಯವಾದದ್ದು. ಅಂತಹ ಮಹಾನ್ ಪುರುಷನನ್ನು ಅರ್ಥೈಸಿಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ’ಯಾಗಿ, ದಮನಿತ ವರ್ಗಗಳ ಸಬಲೀಕರಣದ ನೇತಾರರಾಗಿ ಕಂಡವರೇ ಹೆಚ್ಚು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುತ್ತ ಕಾರ್ಯಕ್ರಮದ ದೇಯೋದ್ದೇಶಗಳನ್ನು ಅರ್ಥಪೂರ್ಣವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಪ್ರಮಾಣ ಪತ್ರ ಪುಸ್ತಕ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸಿ. ಬಿ. ಗಣಾಚಾರಿ, ನಾಗಪ್ಪ ಕುದುರಿಮೋತಿ, ಉಪನ್ಯಾಸಕರಾದ ಬಸವಣ್ಣಾ ಅಡಕಿ, ಎಂ. ಎಚ್. ಪೆಂಟೇದ, ಸಂಗಮೇಶ ಕುಲಕರ್ಣಿ, ಬಸವರಾಜ ಎಮ್ ಕೊಳವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸೋಪ್ ಆರ್ಡರ್ ಮಾಡಲು ಹೋಗಿ 2.97 ಲಕ್ಷ ಕಳೆದುಕೊಂಡ ವ್ಯಕ್ತಿ

Spread the loveಶಿವಮೊಗ್ಗ: ಸೋಪನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 2.97 ಲಕ್ಷ ರೂ. ಕಳೆದುಕೊಂಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ