Breaking News

ಕಂಟ್ರಿಮೆಡ್ ಪಿಸ್ತೂಲ್ ರವಾನೆ ಮಧ್ಯಪ್ರದೇಶಲ್ಲಿ ಆರೋಪಿ ಬಂಧನ

Spread the love

ಬೆಂಗಳೂರು: ರೌಡಿವ್ಯಕ್ತಿಗಳಿಗೆ ಹಾಗೂ ಅಕ್ರಮ ಚಟುವಟಿಕೆಗಲ್ಲಿ ಭಾಗಿಯಾಗಿರುವವರಿಗೆ ಕಂಟ್ರಿಮೆಡ್ ಪಿಸ್ತೂಲ್ ಹಾಗೂ ಜೀವಂತ ಗುಂಡು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಇಂಧೋರ್ ಜಿಲ್ಲೆಯ ಜನ್‌ಜೀರ್ ಅಲಿಯಾಸ್ ಪಾಪಡ್(35) ಬಂಧಿತ ಆರೋಪಿ. ಈತನಿಂದ 1 ಕಂಟ್ರಿಮೆಡ್ ಪಿಸ್ತೂಲ್ ಮತ್ತು 4 ಜೀವಂತ ಗುಂಡು ವಶಕ್ಕೆ  ಪಡೆಯಲಾಗಿದೆ. ಆರೋಪಿ ಈ ಹಿಂದೆ ಸುಹೇಲ್ ಅಹ್ಮದ್ ಎಂಬಾತನಿಗೆ ಪಿಸ್ತೂಲ್ ಮಾರಾಟ ಮಾಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಮಗ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ನಾಲ್ಕು ತಿಂಗಳ ಹಿಂದೆ ಸುಹೇಲ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಜನ್‌ಜೀರ್‌ನಿಂದ ಕಂಟ್ರಿಮೆಡ್ ಪಿಸ್ತೂಲ್ ಖರೀದಿಸಿ ನಗರದಲ್ಲಿ ಕೆಲವರಿ ಮಾರಾಟ ಮಾಡಿದ್ದ. ಈತನ ಜತೆಗೆ ಇತರೆ ಇಬ್ಬರು ಆರೋಪಿಗಳ ಬಂಧಿಸಲಾಗಿತ್ತು. ಈ ವೇಳೆ 0.32 ಎಂಎಂ 6 ಪಿಸ್ತೂಲ್, 52 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಸುಹೇಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆಯುವ ಟಗರು ಕಾಳಗಕ್ಕೆ ಹೋದಾಗ ಜನ್‌ಜೀರ್ ಅಹ್ಮದ್ ಪರಿಚಯವಾಗಿದ್ದು, ಈತನು ಕಂಟ್ರಿಮೆಡ್ ಪಿಸ್ತೂಲ್ ತಯಾರಿಸುವ ವಿಚಾರ ಗೊತ್ತಾಗಿತ್ತು. ಹೀಗಾಗಿ ಆತನಿಂದ 10 ಸಾವಿರ ರೂ.ಗೆ ಪಿಸ್ತೂಲ್, ಜೀವಂತ ಗುಂಡುಗಳನ್ನು ಖರೀದಿಸಿ ನಗರದಲ್ಲಿ ಮಾರಾಟ ಮಾಡಿದ್ದೆ ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ  ನಾಲ್ಕು ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಜನ್‌ಜೀರ್ ಅಹ್ಮದ್‌ನನ್ನು ಬಂಧಿಸಲಾಗಿದೆ.
ಬೇರೆ ಬೇರೆ ರಾಜ್ಯಗಳಿಗೆ ಪಿಸ್ತೂಲ್ ರವಾನೆ
ಆರೋಪಿ ಜನ್‌ಜೀರ್ ಕರ್ನಾಟಕ ಮಾತ್ರವಲ್ಲದೆ, ದೇಶದ ಇತರೆ ರಾಜ್ಯಗಳಿಗೆ ಅಕ್ರಮವಾಗಿ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಖಾಸಗಿ ಪ್ಯಾಕ್ಟರಿಯಲ್ಲಿ ಕಂಟ್ರಿಮೆಡ್ ಪಿಸ್ತೂಲ್‌ಗಳನ್ನು ತಯಾರಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಇಂಧೋರ್‌ನಲ್ಲಿ ಸಿಸಿಬಿ ಡಿಸಿಪಿ ಇಮಾಮ್ ಖಾಸೀಂ ಮತ್ತು ಎಸಿಪಿ ಎಚ್.ಕೆ.ಮಹಾನಂದ್ ಹಾಗೂ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.

Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ