Breaking News

ಹಿಡಕಲ್ಲ ಡ್ಯಾಂ ಬಳಿ ಯುವಕನ ಹತ್ಯೆ

Spread the love

ಬೆಳಗಾವಿ : ಹಳೆ ವೈಷಮ್ಯಮದ ಹಿನ್ನಲೆ ಗೋಕಾಕ ತಾಲೂಕಿನ ಮಾಣಿಕವಾಡಿ ಗ್ರಾಮದ ಪಾಸ್ಕಲ್ ಹೃದಯರಾಜ್ ಮುತ್ತುಸ್ವಾಮಿ(೩೧) ಎಂಬಾತನನ್ನು ಹುಕ್ಕೇರಿ ತಾಲ್ಲೂಕಿನ ಹಿಡಕಲ್ಲ ಜಲಾಶಯದ ಸಮೀಪ ಗುಡ್ಡ ಪ್ರದೇಶದಲ್ಲಿ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಕೊಲೆಯಾದ ಯುವಕ ಪಾಸ್ಕಲ್ ಹೃದಯರಾಜ್ ಮುತ್ತುಸ್ವಾಮಿ ಗೆಳೆಯರೊಂದಿಗೆ ಹಿಡಕಲ್ಲ ಜಲಾಶಯದ ಬಳಿ ಕುಳಿತಿರುವಾಗ,ಆಟೋದಲ್ಲಿ ಬಂದ ಆರೋಪಿಗಳು ಮಾರಕಾಸ್ತçದಿಂದ ದಾಳಿ ಮಾಡಿಕೊಲೆ ಮಾಡಿದೆ. ಮೃತ ಈ ಹಿಂದೆ ಗೋಕಾಕನ ಕೊಲೆ, ಅಪಹರಣ ಸೇರಿ ಹಲವು ಅಕ್ರಮ ಚಟುವಟಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಳೆದ ಹಲವು ದಿನಗಳಿಂದ ಕೊಲೆಯಾದ ಯುವಕ ಜೈಲಿನಲ್ಲಿದ್ದ ಮೃತ ಯುವಕ ಈಚೆಗೆ ಜೈಲಿನಿಂದ ಬಿಡುಗಡೆಯಾದನು.ಕೊಲೆಗೆ ಹಳೇ ದ್ವೇಷವೇ ಕಾರಣ ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪ್ರಕರಣ ದಾಖಲಿಸಿಕೊಂಡ ಯಮಕನಮರಡಿ ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ