Breaking News

ಎಸ್‌ಐಆರ್‌ನಲ್ಲಿ ಲೋಪವಾಗದಿರಲಿ

Spread the love

ಅಥಣಿ: ಎಸ್‌ಐಆರ್‌ನಿಂದ ಯಾರೂ ಹೊರಗುಳಿಯದಂತೆ ಬಿಎಲ್‌ಒ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಬಿಜೆಪಿ ಎಸ್‌ಐಆರ್ ಉಸ್ತುವಾರಿ ವಿಜಯಕುಮಾರ ಕೂಡಗನೂರ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಥಣಿ ಕ್ಷೇತ್ರದಲ್ಲಿ ೨೬೦ ಬೂತ್‌ಗಳಿವೆ. ಮತದಾರರಿಗೆ ಸರಿಯಾಗಿ ಜಾಗೃತಿ ಮೂಡಿಸಿಲ್ಲ ಮತ್ತು ಬಿಎಲ್‌ಒಗಳಿಗೆ ಸರಿಯಾಗಿ ಮಾಹಿತಿ ನೀಡದೆ ಇರುವುದರಿಂದ ಲೋಪ-ದೋಷಗಳು ಕಂಡುಬರುತ್ತಿವೆ. ಬಿಎಲ್‌ಒಗಳು ಮನೆ ಮನೆಗೆ ತೆರಳಿ ಸರಿಯಾಗಿ ಮಾಹಿತಿ ನೀಡದೆ ಮತದಾರರನ್ನು ಗೊಂದಲಕ್ಕೆ ನೂಕುತ್ತಿರುವುದು ೭೩, ೮೧ರ ಬೂತ್ ಭೇಟಿ ವೇಳೆ ಕಂಡುಬಂದಿದೆ. ಈ ಬಗ್ಗೆ ತಹಸೀಲ್ದಾರ್ ಸೂಕ್ತ ಕ್ರಮ ಕೈಗೊಂಡು ಅರಿವು ಮೂಡಿಸಬೇಕು ಎಂದರು.
ಬಿಜೆಪಿ ಮಂಡಳ ಅಧ್ಯಕ್ಷ ಗಿರೀಶ ಬುಟಾಳೆ ಮಾತನಾಡಿ, ೨೦೦೨ರ ಬಳಿಕ ೨೦೨೬ರಲ್ಲಿ ಎಸ್‌ಐಆರ್ ಬಂದಿದೆ. ಮತದಾರರು ಜಾಗ್ರತೆಯಿಂದ ಅರ್ಜಿ ಭರ್ತಿ ಮಾಡಬೇಕು. ನಿರ್ಲಕ್ಷ ಮಾಡಿದಲ್ಲಿ ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬೇಕಾಗುತ್ತದೆ ಮತ್ತು ಸರ್ಕಾರದ ಯಾವುದೇ ಯೋಜನೆಗಳು ಸಿಗುವುದಿಲ್ಲ ಎಂದರು.
ಪಕ್ಷದ ಧುರೀಣರಾದ ನಿಂಗಪ್ಪ ನಂದೇಶ್ವರ, ಸಂಪತ್ತಕುಮಾರ ಶೆಟ್ಟಿ, ದೀಪಕ ಪಾಟೀಲ, ಅಪ್ಪು ಮೋಕಾಶಿ, ಸೌರಭ ಮಾಶ್ಯಾಳ, ಅಶೋಕ ದಾನಗೊಂಡ, ಪುಟ್ಟು ಹಿರೇಮಠ, ಮುಕುಂದ ಕುಲಕರ್ಣಿ, ಅಭಯ ಸಗರೆ, ಪ್ರಶಾಂತ ಚಂಡಕಿ ಇತರರಿದ್ದರು.

Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ