Breaking News

ವಸತಿ ಶಾಲೆಯಲ್ಲಿ ಬಾಲಕ ಅನುಮಾನಾಸ್ಪದ ಸಾವು ಕೇಸ್ – ದೈಹಿಕ ಶಿಕ್ಷಕ ಪೊಲೀಸರ ವಶಕ್ಕೆ

Spread the love

ಬೆಂಗಳೂರು: ವಸತಿ ಶಾಲೆಯಲ್ಲಿ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೈಹಿಕ ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ.

ಮೃತ ಗುರುಕಿರಣ್ ಪೋಷಕರು ಶಾಲಾ ಆಡಳಿತ ಮಂಡಳಿ ಹಾಗೂ ದೈಹಿಕ ಶಿಕ್ಷಕನ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು. ದೂರಿನನ್ವಯ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಇದೀಗ ದೈಹಿಕ ಶಿಕ್ಷಕ ನಾರಾಯಣ್‌ನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ರಣರಣಗವಾಗಿದ್ದ ಶಾಲಾ ಮೈದಾನ:
ಬುಧವಾರ (ಜು.8) ಅನುಮಾನಾಸ್ಪದವಾಗಿ ಬಾಲಕ ಸಾವನ್ನಪ್ಪಿದ್ದಕ್ಕೆ ದೈಹಿಕ ಶಿಕ್ಷಕ ಕಾರಣ ಎಂದು ಪೋಷಕರು ಹಿಗ್ಗಾಮುಗ್ಗ ಥಳಿಸಿದ್ದರು. ಮಗನ ಸಾವಿಗೆ ದೈಹಿಕ ಶಿಕ್ಷಕ ಹಾಗೂ ಆಡಳಿತ ಮಂಡಳಿ ಕಾರಣ ಎಂದು ಗಲಾಟೆ ಮಾಡಿ, ಆಕ್ರೋಶ ಹೊರಹಾಕಿದ್ದರು. ಆನಂತರ ಮಗನ ಸಾವಿನ ಬಗ್ಗೆ ನ್ಯಾಯ ಕೊಡಿಸುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಪೋಷಕರು ದೂರು ದಾಖಲಿಸಿದ್ದರು.

ಸದ್ಯ ಪೊಲೀಸರು ಬಾಲಕ ಗುರುಕಿರಣ್‌ಗೆ ಈ ಹಿಂದೆ ಯಾವುದಾದರು ಆರೋಗ್ಯ ಸಮಸ್ಯೆ ಇತ್ತಾ ಅನ್ನೋದನ್ನ ಪರಿಶೀಲನೆ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಬಾಲಕ ಗುರುಕಿರಣ್‌ಗೆ ಯಾವುದೇ ಅನಾರೋಗ್ಯದ ಸಮಸ್ಯೆ ಇರಲಿಲ್ಲ ಅನ್ನೋದು ಕಂಡುಬಂದಿದ್ದು, ಪೋಷಕರಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.


Spread the love

About Laxminews 24x7

Check Also

ವಿಜಯಪುರ | ಭೂತನಾಳ ಕೆರೆಯಲ್ಲಿ 6 ಶವ ಪತ್ತೆ – ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಶಂಕೆ

Spread the loveವಿಜಯಪುರ: ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ  6 ಜನರ ಶವಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹಕ್ಕೆ ಕುಟುಂಬವೇ ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ