ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ನಲ್ಲಿ ಕೆಲವು ಲೋಪ ಕಂಡುಬಂದ ಹಿನ್ನೆಲೆ ಬಿಜೆಪಿ, ಜೆಡಿಎಸ್ ಮೈತ್ರಿ ನಾಯಕರು ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ಪ್ರಹ್ಲಾದ್ ಜೋಶಿ, ಹೆಚ್‌ಡಿಕೆ, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಿ.ಟಿ ರವಿ, ಅಶ್ವಥ್ ನಾರಾಯಣ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಕಾರಜೋಳ ನಿಯೋಗ ದೂರು ಸಲ್ಲಿಕೆ ಮಾಡಿದೆ. ದೂರಿನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ವಿಪಕ್ಷಗಳ ಆರೋಪ ಏನು?
* ಹಲವೆಡೆ ಸಾಮೂಹಿಕ ಎಸ್‌ಐಆರ್
* ಮಸೀದಿ, ಚೌಲ್ಟ್ರಿಗಳಲ್ಲಿ ಸಾಮೂಹಿಕ ಎಸ್‌ಐಆರ್
* ಬಿಎಲ್‌ಒಗಳಿಂದ ಚುನಾವಣಾ ಆಯೋಗದ ಮಾರ್ಗಸೂಚಿಗಳ ಉಲ್ಲಂಘನೆ
* ಬಿಎಲ್‌ಒಗಳ ಮೇಲೆ ಸರ್ಕಾರದಿಂದ ಒತ್ತಡ, ಅನರ್ಹರ ಸೇರ್ಪಡೆಗೆ ಒತ್ತಡ
* ನಕಲಿ ದಾಖಲೆ ಸೃಷ್ಟಿಸಿ ಅನರ್ಹ ಮತದಾರರ ಸೇರ್ಪಡೆ
* ವಿಪಕ್ಷಗಳ ಬಿಎಲ್‌ಎಗಳಿಗೆ ಮಾಹಿತಿ ಕೊಡದೇ ಎಸ್‌ಆರ್
* ರಾಮನಗರ, ಯಶವಂತಪುರ, ಜಯನಗರ, ಇಂಡಿ, ಕುಣಿಗಲಗ, ಪಾವಗಡ ಮುಂತಾದ ಕಡೆ ಅಕ್ರಮವಾಗಿ ಸಾಮೂಹಿಕ ಎಸ್‌ಐಆರ್ ಹೆಚ್ಚಳ
* ಸಾಮೂಹಿಕವಾಗಿ ನಡೆದ ಎಸ್‌ಐಆರ್ ರದ್ದಾಗಬೇಕು, ಮತ್ತೆ ಹೊಸದಾಗಿ ಎಸ್‌ಐಆರ್ ನಡೆಸಬೇಕು
* ಸಾಧ್ಯವಾದರೆ ಹೊರ ರಾಜ್ಯದ ಅಧಿಕಾರಿಗಳ ಮೂಲಕ ಎಸ್‌ಐಆರ್ ನಡೆಸಲು ಮನವಿ, ಸರ್ಕಾರದಿಂದ ಅಧಿಕಾರದ ದುರ್ಬಳಕೆ, ಬಿಎಲ್‌ಒಗಳ ದುರ್ಬಳಕೆ.
Laxmi News 24×7