Breaking News

ಜೂ.7ಕ್ಕೆ ಕನಕಪುರಕ್ಕೆ ಡಿಕೆಶಿ, ಗ್ರಾಮಸ್ಥರ ಭೇಟಿಯಾಗಲಿರುವ ಸಿಎಂ

Spread the love

ಬೆಂಗಳೂರು: ಭಾನುವಾರ (ಜೂ.5) ಸಿಎಂ ಡಿಕೆಶಿ ಅವರು ಕನಕಪುರ ತಾಲೂಕು ಪ್ರವಾಸ ಹಮ್ಮಿಕೊಂಡಿದ್ದು, ಕುಲದೇವರಿಗೆ ವಿಶೇಪ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಗ್ರಾಮಸ್ಥರನ್ನು ಭೇಟಿಯಾಗಲಿದ್ದಾರೆ.

ಈ ವೇಳೆ ಸ್ವಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಜೊತೆಗೆ ಮನೆದೇವತೆ ಕೆಂಕೇರಮ್ಮ ಹಾಗೂ ಕುಲದೇವತೆ ಕಬ್ಬಾಳಮ್ಮ ದೇವಾಲಯಗಳಿಗೂ ಭೇಟಿ ನೀಡಿ, ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಜೊತೆಗೆ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿರುವ ತಂದೆ ಕೆಂಪೇಗೌಡ ಸಮಾಧಿಗೂ ಪೂಜೆ ಸಲ್ಲಿಸಲಿರುವ ಡಿಕೆಶಿ ಹುಟ್ಟೂರಿನ ಗ್ರಾಮಸ್ಥರನ್ನೂ ಭೇಟಿ ಮಾಡಲಿದ್ದಾರೆ. 

ಇನ್ನೂ ನಾಳೆ (ಜೂ.6) ನೊಣವಿನಕೆರೆಯ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಲಿದ್ದಾರೆ. ಸಿಎಂ ಗದ್ದುಗೆಗೆ ಏರುವ ಎಲ್ಲಾ ಹಂತದಲ್ಲೂ ಅಜ್ಜಯ್ಯನನ್ನೇ ಆರಾಧಿಸುತ್ತಿದ್ದ ಡಿಕೆಶಿ ನಾಗರಬಾವಿ ಶಾಖಾಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ನಾಳೆ ತುಮಕೂರಿನ ನೊಣವಿನಕೆರೆಯ ಮಠಕ್ಕೆ ಖುದ್ದು ಭೇಟಿ ನೀಡಲಿದ್ದಾರೆ.

ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಂತೆ ಸಿಎಂ ಡಿಕೆ ಶಿವಕುಮಾರ್ ಟೆಂಪಲ್ ರನ್ ಮುಂದುವರಿಸಿದ್ದಾರೆ. ಇಂದು ಬೆಂಗಳೂರಿನ ಶಕ್ತಿದೇವತೆ ಅಣ್ಣಮ್ಮ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಂಗಳೂರು ನಗರ ದೇವತೆ ಅಣ್ಣಮ್ಮನಿಗೆ ಸಿಎಂ ಡಿಕೆಶಿ ಹರಕೆ ಹೊತ್ತಿದ್ದರು. ಸಿಎಂ ಆದ್ರೆ ಸನ್ನಿಧಾನಕ್ಕೆ ಬಂದು ಹರಕೆ ತೀರಿಸೋದಾಗಿ ಹರಕೆ ಹೊತ್ತಿದ್ದರು. ಇಂದು ಉಪ್ಪು, ಮೊಸರು ಹಾಕಿ ಅಣ್ಣಮ್ಮದೇವಿಗೆ ಸಿಎಂ ನಮಿಸಿದ್ದಾರೆ. ಸಿಎಂ ಪೂಜೆ ಸಲ್ಲಿಸಿದ ವೇಳೆ ದೇವರ ಬಲಭಾಗದಿಂದ ಹೂ ಪ್ರಸಾದ ಸಿಕ್ಕಿದೆ. ಆ ಹೂವನ್ನು ಅರ್ಚಕರು ಡಿಕೆಶಿ ಕೈಗಿಟ್ಟಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ